ಐದು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ನವದೆಹಲಿ, ಡಿ. 8 (ಪಿಟಿಐ, ಯುಎನ್‌ಐ)– ಮಹಾರಾಷ್ಟ್ರ, ಗುಜರಾತ್, ಬಿಹಾರ, ಒರಿಸ್ಸಾ ಮತ್ತು ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಇಂದು ಪ್ರಕಟಿಸಲಾಗಿದೆ. ಮುಂದಿನ ಫೆಬ್ರುವರಿ ನಾಲ್ಕರಿಂದ 28ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯುವುದು ಎಂದು ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಜೇಲ್ ಸಿಂಗ್ ಆರೋಗ್ಯ: ಯಥಾಸ್ಥಿತಿ ಮುಂದುವರಿಕೆ

ಚಂಡೀಗಡ, ಡಿ. 8 (ಪಿಟಿಐ)– ಇಲ್ಲಿನ ಪಿಜಿಐ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಒಂದೇ ರೀತಿಯಲ್ಲಿ ಮುಂದುವರಿದಿದೆ.

ಏತನ್ಮಧ್ಯೆ ಸಂಜೆ ಇಲ್ಲಿಗೆ ಧಾವಿಸಿ ಬಂದ ಗೃಹ ಸಚಿವ ಎಸ್.ಬಿ. ಚವಾಣ್ ಅವರು ಸಿಂಗ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿ.ಕೆ. ಕಾಕ್ ಅವರು ಸಚಿವರಿಗೆ ಮಾಜಿ ರಾಷ್ಟ್ರಪತಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದರು.

ಕೆ.ಕೆ. ಹೆಬ್ಬಾರ್‌ಗೆ ವೆಂಕಟಪ್ಪ ಪ್ರಶಸ್ತಿ

ಬೆಂಗಳೂರು, ಡಿ. 8– ಪ್ರಖ್ಯಾತ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರಿಗೆ 1994ನೇ ಸಾಲಿನ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ದೊರೆತಿದೆ. ಹೆಬ್ಬಾರ್ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ನೀಡಲಾಗುವುದು.

ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಕಲಾವಿದರಿಗೆ ವಿಶೇಷ ಪ್ರಶಸ್ತಿಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರ, ಚಿತ್ರಕಲೆಗೆ ಗಮನಾರ್ಹ ಕೊಡುಗೆ ನೀಡಿದ ರಾಜ್ಯದ ಕಲಾವಿದರಿಗೆ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ನೀಡಲು ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.