ಬುಧವಾರ, ಏಪ್ರಿಲ್ 14, 2021
31 °C
ಮಂಗಳವಾರ, 2–04– 1996

25 ವರ್ಷಗಳ ಹಿಂದೆ: ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ

ಬೆಂಗಳೂರು, ಏ. 1– ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಹಿರಿಯ ಸಚಿವರಾದ ಆರ್‌.ಎಲ್‌.ಜಾಲಪ್ಪ,ಪಿ.ಜಿ.ಆರ್‌.ಸಿಂಧ್ಯ, ವೈಜನಾಥ್‌ ಪಾಟೀಲ್‌ ಮತ್ತು ಶಿವಾನಂದ ಕೌಜಲಗಿ ಅವರೂ ಸೇರಿದಂತೆ ಒಟ್ಟು ಏಳು ಜನ ಸಚಿವರಿಗೆ ರಾಜ್ಯ ಜನತಾ ದಳದ ಸಂಸದೀಯ ಮಂಡಲಿ ಆದೇಶ ನೀಡಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಬಹುತೇಕ ಸಚಿವರು ಹಿಂದೇಟು ಹಾಕುತ್ತಿರುವಾಗಲೇ ಸಚಿವರಿಗೆ ಮಂಡಲಿ ಈ ಆದೇಶ ನೀಡಿರುವುದು ದಳದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

ಹವಾಲ: 7 ಮಾಜಿ ಸಚಿವರಿಗೆ ಟಿಕೆಟ್‌ ಇಲ್ಲ

ನವದೆಹಲಿ, ಏ. 1 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಏಳು ಮಾಜಿ ಸಚಿವರಿಗೆ ಲೋಕಸಭಾ ಚುನಾವಣೆಗೆ ಕಾಂಗೈ ಟಿಕೆಟ್‌ ನಿರಾಕರಿಸಿದೆ. ಇವರಲ್ಲಿ ಬಲರಾಂ ಜಾಖಡ್‌, ಆರ್‌.ಕೆ.ಧವನ್‌, ಮಾಧವರಾವ್‌ ಸಿಂಧಿಯಾ, ವಿ.ಸಿ.ಶುಕ್ಲಾ, ಬೂಟಾ ಸಿಂಗ್‌, ಕಮಲನಾಥ್‌, ಅರವಿಂದ ನೇತಂ ಸೇರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು