ಬುಧವಾರ, ಮೇ 12, 2021
18 °C

25 ವರ್ಷಗಳ ಹಿಂದೆ: ಶನಿವಾರ 04.05.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಧಿತ ಚಂದ್ರಸ್ವಾಮಿ ತಿಹಾರ್ ಜೈಲಿಗೆ

ನವದೆಹಲಿ, ಮೇ 3 (ಪಿಟಿಐ, ಯುಎನ್ಐ)– ವಂಚನೆ ಪ್ರಕರಣದಲ್ಲಿ ಶಾಮೀಲಾಗಿ, ಬಹುದಿನಗಳ ನಿರೀಕ್ಷೆಯಂತೆ ನಿನ್ನೆ ರಾತ್ರಿ ಹಠಾತ್ತಾಗಿ ಬಂಧನಕ್ಕೊಳಗಾದ, ಪ್ರತಿಷ್ಠಿತ ರಾಜಕಾರಣಿಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ತಿರುಗಾಡುತ್ತಿದ್ದ ವಿವಾದಾಸ್ಪದ ಸಾಧು ಚಂದ್ರಸ್ವಾಮಿ ಅವರನ್ನು ಇಂದು ತಿಹಾರ್ ಸೆರೆಮನೆಗೆ ಕಳುಹಿಸಲಾಯಿತು.

ನಿನ್ನೆ ರಾತ್ರಿ ಮದ್ರಾಸಿನಲ್ಲಿ ಬಂಧನಕ್ಕೊಳಗಾದ ಚಂದ್ರಸ್ವಾಮಿ ಹಾಗೂ ಅವರ ಕಾರ್ಯದರ್ಶಿ ಕೈಲಾಸ್‌ನಾಥ್ ಅಗರ್‌ವಾಲ್ ಅವರನ್ನು ಸಿಬಿಐ ಅಧಿಕಾರಿಗಳು ಇಂದು ದೆಹಲಿ ಮೆಟ್ರೊಪಾಲಿಟನ್ ಕೋರ್ಟಿನ ಮುಂದೆ ಹಾಜರುಪಡಿಸಿದಾಗ, ನ್ಯಾಯಾಧೀಶರು ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸುವಂತೆ ಆದೇಶ ನೀಡಿದರು.

ದಳದ ಅಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ

ಬೆಂಗಳೂರು, ಮೇ 3– ಪ್ರದೇಶ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತಾವು ನಿರ್ಧರಿಸಿರುವುದಾಗಿ ಸಿ.ಎಂ.ಇಬ್ರಾಹಿಂ ಇಂದು ತಿಳಿಸಿದರು.

ಪಕ್ಷದ ಬಗೆಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ಸಮಿತಿ ಸಭೆ ಕರೆಯಬೇಕೆಂಬ ರಾಮಕೃಷ್ಣ ಹೆಗಡೆ ಅವರ ಸೂಚನೆಯನ್ನು ತಾವು ತಳ್ಳಿಹಾಕಿದುದಾಗಿ ಪ್ರಕಟವಾಗಿರುವುದು ಮತ್ತು ಇದರಿಂದಾಗಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳುವುದು ಸರಿಯಲ್ಲ, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು