ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ 2.5.1997 (ಶುಕ್ರವಾರ)

Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಜೈಪಾಲ್‌, ಧರ್‌ ಸೇರಿ 6 ಸಚಿವರ ಪ್ರಮಾಣ

ನವದೆಹಲಿ, ಮೇ. 1– ಪ್ರಧಾನಿ ಇಂದರ್‌ ಕುಮಾರ್‌ ಗುಜ್ರಾಲ್‌ ಅವರು ತಮ್ಮ ಹನ್ನೊಂದು ದಿನಗಳ ಕೇಂದ್ರ ಸಂಪುಟಕ್ಕೆ ಇಂದು ಹೊಸದಾಗಿ ಮೂವರು ಸಂಪುಟ ದರ್ಜೆ ಹಾಗೂ ಮೂವರು ರಾಜ್ಯ ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ವಿಸ್ತರಣೆ ಮಾಡಿದರು.

ಈ ವಿಸ್ತರಣೆಯಲ್ಲಿ ಸಂಪುಟ ಪ್ರವೇಶಿಸಿದ ಜನತಾದಳದ ವಕ್ತಾರ ಎಸ್‌.ಜೈಪಾಲ ರೆಡ್ಡಿ ಅವರಿಗೆ ಜನತಾದಳದ ಕರ್ನಾಟಕ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಹೊಂದಿದ್ದ ಪ್ರತಿಷ್ಠಿತ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ನೀಡಲಾಗಿದ್ದು ಉಳಿದ ಸಚಿವರಿಗೆ ಅವರು ಹಿಂದಿನ ಸರ್ಕಾರದಲ್ಲಿ ಹೊಂದಿದ್ದ ಖಾತೆಗಳನ್ನೇ ನೀಡಲಾಗಿದೆ.

ಜೈಪಾಲ್‌ ರೆಡ್ಡಿ (ವಾರ್ತಾ ಮತ್ತು ಪ್ರಸಾರ), ಚಿದಂಬರಂ (ಹಣಕಾಸು), ಎಂ. ಅರುಣಾಚಲಂ (ಕಾರ್ಮಿಕ) ಅವರು ಸಂಪುಟ ದರ್ಜೆಯ ಸಚಿವರುಗಳಾಗಿ, ಮಕ್ಬೂಲ್‌ ಧರ್‌ (ಗೃಹ ಖಾತೆ), ಧನುಷ್‌ಕೋಡಿ ಆದಿತ್ಯನ್‌ (ಯುವಜನ ಸೇವೆ ಮತ್ತು ಕ್ರೀಡೆ) ಮತ್ತು ಎಸ್‌.ಆರ್‌. ಬಾಲಸುಬ್ರಮಣ್ಯಂ (ಸಂಸದೀಯ ವ್ಯವಹಾರ) ರಾಜ್ಯ ಸಚಿವರುಗಳಾಗಿ ರಾಷ್ಟ್ರಪತಿ ಡಾ. ಶಂಕರ ದಯಾಳ್‌ ಶರ್ಮಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಸುಬ್ರಮಣ್ಯ ಮಠದ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ವಿವಾಹ

ಮಂಡ್ಯ, ಮೇ 1– ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕುಕ್ಕೆ ಸುಬ್ರಮಣ್ಯ ಮಠದ ಶ್ರೀ ವಿದ್ಯಾಭೂಷಣ ತೀರ್ಥಸ್ವಾಮೀಜಿ (43) ಅವರು ಬಳ್ಳಾರಿಯ ವೈದ್ಯರೊಬ್ಬರ ಮಗಳಾದ ರಮಾ ಕುಲಕರ್ಣಿ (24) ಎಂಬುವರನ್ನು ಮಳವಳ್ಳಿ ಸಮೀಪದ ಮಾರೇಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಗುರುವಾರ ಶಾಸ್ತ್ರೋಕ್ತವಾಗಿ ಮದುವೆಯಾದರು.

ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಅವರು ಸಂಸಾರಿಯಾಗಲಿದ್ದಾರೆ ಎಂಬ ಸುದ್ದಿ ತುಂಬಾ ಸಮಯದಿಂದ ಹರಡಿತ್ತು. ಇವರು 15 ದಿನಗಳ ಹಿಂದೆ ಪೀಠತ್ಯಾಗ ಮಾಡಿ ತಮ್ಮ ಹೆಸರಿನಿಂದ ಶ್ರೀಯನ್ನು ತೆಗೆದು ಹಾಕಿದ್ದರು ಎನ್ನಲಾಗಿದೆ. ಅವರ ತಾಯಿ ಮಂದಾಕಿನಿ ಸೇರಿದಂತೆ ಸುಮಾರು 40 ಜನರು ಮದುವೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT