ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಕಾರ್ಗಿಲ್‌: ಉಗ್ರರ ನೆಲೆ ಮೇಲೆ ವಾಯುದಾಳಿ

Published 27 ಮೇ 2024, 0:17 IST
Last Updated 27 ಮೇ 2024, 0:17 IST
ಅಕ್ಷರ ಗಾತ್ರ

ನವದೆಹಲಿ, ಮೇ 26 (ಯುಎನ್‌ಐ, ಪಿಟಿಐ)– ಪಾಕಿಸ್ತಾನ ಬೆಂಬಲಿತ ಉಗ್ರರು ಗಣನೀಯ ಸಂಖ್ಯೆಯಲ್ಲಿರುವ ಜಮ್ಮು–ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಭಾರತದ ವಾಯುಪಡೆಗಳು ಇಂದು ನಸುಕಿನಲ್ಲಿ ವ್ಯಾಪಕ ದಾಳಿ ನಡೆಸಿದವು. ಭಾರತದ ಸಂಯುಕ್ತ ಪಡೆಗಳು ಈ ವಲಯವನ್ನು ಸುತ್ತುವರಿದು ನುಸುಳಿ ಬಂದಿರುವ ಉಗ್ರರನ್ನು ಹೊರಹಾಕು ವವರೆಗೂ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಅವ್ಯಾಹತವಾಗಿ ದಾಳಿ ಮುಂದುವರಿಸಲಿವೆ.

ದಾಳಿಗೆ 160 ಮಂದಿ ಪಾಕ್ ಬೆಂಬಲಿತ ಉಗ್ರಗಾಮಿಗಳು ಬಲಿಯಾಗಿದ್ದಾರೆ. 17 ಭಾರತೀಯ ಯೋಧರು ಮೃತಪಟ್ಟಿದ್ದು, 14 ಮಂದಿ ಕಣ್ಮರೆಯಾಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕರು ಇಂದು ದೂರವಾಣಿ ಮೂಲಕ ಸಂಪರ್ಕ ಕಲ್ಪಿಸಿಕೊಂಡು ಕಾರ್ಗಿಲ್ ವಲಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT