ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ದಾಳಿ ಸ್ಥಗಿತ: ಅಮೆರಿಕ ಹಟಕ್ಕೆ ಜಗ್ಗದ ಇರಾಕ್

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ದಾಳಿ ಸ್ಥಗಿತ: ಅಮೆರಿಕ ಹಟಕ್ಕೆ ಜಗ್ಗದ ಇರಾಕ್

ವಾಷಿಂಗ್ಟನ್, ಡಿ. 20 (ಪಿಟಿಐ)– ಇರಾಕ್ ಮೇಲಿನ ನಾಲ್ಕು ದಿನಗಳ ತಮ್ಮ ಮಿಲಿಟರಿ ದಾಳಿಯನ್ನು ಅಮೆರಿಕ ಹಾಗೂ ಬ್ರಿಟನ್‌ ಸ್ಥಗಿತಗೊಳಿಸಿದವು; ‘ನಮ್ಮ ಉದ್ದೇಶ ಸಾಧನೆ ಆಗಿದೆ’ ಎಂದು ಅವು ಪ್ರಕಟಿಸಿವೆ.

ಬಾಗ್ದಾದ್‌ಗೆ ಗಮನಾರ್ಹ ಹಾನಿಯಾಗಿದೆ ಎಂದು ತಿಳಿಸಿರುವ ಅಮೆರಿಕ ಹಾಗೂ ಬ್ರಿಟನ್ ‘ಅಗತ್ಯವೆನಿಸಿದರೆ ಮತ್ತೆ ದಾಳಿ ಮಾಡುವೆವು’ ಎಂಬ ಎಚ್ಚರಿಕೆಯನ್ನೂ ನೀಡಿವೆ.

ಇರಾಕನ್ನು ‘ದಂಡಿಸುವ’ ಉದ್ದೇಶದ ನಾಲ್ಕು ದಿನಗಳ ವಾಯುಸೇನಾ ಕಾರ್ಯಾ
ಚರಣೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದ ಅಮೆರಿಕದ ಅಧ್ಯಕ್ಷ ಕ್ಲಿಂಟನ್ ‘ನಮ್ಮ ಉದ್ದೇಶ ಸಾಧನೆ ಆಗಿದೆ. ಸದ್ದಾಂ ಅವರ ಸಾಮೂಹಿಕ ವಿನಾಶದ ಶಸ್ತ್ರ ನಿರ್ಮಾಣ ಸವಲತ್ತುಗಳಿಗೆ, ಸೇನಾ ನೆಲೆಗಳಿಗೆ ಹಾಗೂ ಭದ್ರತಾ ನೆಲೆಗಳಿಗೆ ಗಮನಾರ್ಹ ಹಾನಿ ಉಂಟು ಮಾಡಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಠಾಣೆಗೆ ವೀರಪ್ಪನ್ ಹಠಾತ್ ದಾಳಿ ಹಣ, ಬಂದೂಕು ಲೂಟಿ

ಕೊಯಮತ್ತೂರು, ಡಿ. 20 (ಪಿಟಿಐ)– ಕುಖ್ಯಾತ ದಂತಚೋರ ವೀರಪ್ಪನ್‌ ತನ್ನ ಒಂಬತ್ತು ಮಂದಿ ಸಹಚರರೊಂದಿಗೆ ಈರೋಡ್ ಜಿಲ್ಲೆಯ ಅಂದಿಯೂರು ಸಮೀಪದ ವೆಲ್ಲಿತಿರುಪೂರು ಪೊಲೀಸ್ ಠಾಣೆಗೆ ಇಂದು ರಾತ್ರಿ ಹಠಾತ್ ದಾಳಿ ನಡೆಸಿ, ರೂ. 5 ಸಾವಿರ ನಗದು, 9 ಬಂದೂಕು ಮತ್ತು ಮದ್ದುಗುಂಡುಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT