ಆಮೆಗತಿಯಲ್ಲಿ ಕಾಂಗೈ– ಅತಂತ್ರ ಲೋಕಸಭೆ ಖಚಿತ
ನವದೆಹಲಿ, ಮೇ 9 (ಪಿಟಿಐ, ಯುಎನ್‌ಐ)– ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ತಾವು ಸ್ಪರ್ಧಿಸಿರುವ ಬರ್ಹಾಂಪುರ ಮತ್ತು ನಂದ್ಯಾಲ ಕ್ಷೇತ್ರಗಳೆರಡರಲ್ಲೂ ಜಯ ಗಳಿಸಿದ್ದರೂ ಅವರ ನಾಯಕತ್ವದ ಕಾಂಗ್ರೆಸ್ ಪಕ್ಷ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ರಂಗ– ಎಡಪಕ್ಷಗಳಿಂದ ಹಿಂದೆಂದೂ ಇಲ್ಲದಷ್ಟು ಭಾರಿ ಪರಾಜಯ ಅನುಭವಿಸಿದೆ. ಅತಂತ್ರ ಸಂಸತ್ತಿನಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆಯದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಖಚಿತ ಸೂಚನೆಗಳಿವೆ.

ಇದುವರೆಗಿನ ಫಲಿತಾಂಶ ಮತ್ತು ಮುನ್ನಡೆಯ ಕಂಪ್ಯೂಟರ್ ಲೆಕ್ಕಾಚಾರದ ಪ್ರಕಾರ, ಬಿಜೆಪಿಗೆ 175–185, ರಾಷ್ಟ್ರೀಯ ರಂಗ– ಎಡಪಕ್ಷ ಮೈತ್ರಿಕೂಟಕ್ಕೆ 140–150 ಸ್ಥಾನಗಳು ದೊರೆಯಲಿದ್ದು ಕಾಂಗೈ 3ನೇ ಸ್ಥಾನಕ್ಕೆ ಇಳಿಯಲಿದೆ.

ಅಣ್ಣಾಡಿಎಂಕೆ ಧೂಳೀಪಟ: ಜಯಲಲಿತಾ ರಾಜೀನಾಮೆ
ಮದ್ರಾಸು, ಮೇ 9 (ಯುಎನ್‌ಐ)– ಲೋಕಸಭೆ ಮತ್ತು ವಿಧಾನಸಭೆಯ ಎರಡೂ ಚುನಾವಣೆಗಳಲ್ಲಿ ಪೂರ್ಣ ನೆಲಕಚ್ಚಿದ ಅಣ್ಣಾಡಿಎಂಕೆ ಪಕ್ಷದ ನಾಯಕಿ ಜೆ.ಜಯಲಲಿತಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬರಗೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಾ ಅವರನ್ನು ಡಿಎಂಕೆಯ ಇ.ಸಿ.ಸುಗವನಂ 8,866 ಮತಗಳಿಂದ ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.