ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ

Last Updated 16 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಕಾವೇರಿ: ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ

ನವದೆಹಲಿ, ಡಿ. 16– ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಬಿಳಿಗುಂಡ್ಲು ಹಾಗೂ ಮೆಟ್ಟೂರುಗಳಲ್ಲಿ ಹರಿದು ಬರುವ ನೀರಿನ ಪ್ರಮಾಣ ಹಾಗೂ ಅಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲು ಇಂದು ಇಲ್ಲಿ ಸೇರಿದ ದಕ್ಷಿಣದ ನಾಲ್ಕು ರಾಜ್ಯಗಳ ಕಾರ್ಯದರ್ಶಿಗಳ ಸಭೆ ನಿರ್ಧರಿಸಿತು.

‘ಗ್ಯಾಟ್’ ಒಪ್ಪಂದ ವಿರುದ್ಧ ಮತ್ತೆ ಸಂಸತ್ತಿನಲ್ಲಿ ಗದ್ದಲ

ನವದೆಹಲಿ, ಡಿ. 16 (ಪಿಟಿಐ, ಯುಎನ್‌ಐ)– ಜಿನೀವಾದಲ್ಲಿ ನಿನ್ನೆ ‘ಗ್ಯಾಟ್’ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅಮೆರಿಕಕ್ಕೆ ‘ಮಾರಿಕೊಂಡಿದೆ’ ಎಂದು ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ಸಂಬಂಧ ಪ್ರಧಾನಿ ನರಸಿಂಹರಾವ್ ಅವರು ಹೇಳಿಕೆ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದುದರಿಂದ ಉಭಯ ಸದನಗಳಲ್ಲಿ ಎರಡನೇ ದಿನವಾದ ಇಂದೂ ಸಹ ಗದ್ದಲ, ಕೋಲಾಹಲ ಉಂಟಾಗಿ ಕಲಾಪ ಪೂರ್ಣ ಅಸ್ತವ್ಯಸ್ತಗೊಂಡಿತು.

ಅನಕ್ಷರತೆ ನಿರ್ಮೂಲನ: 9 ರಾಷ್ಟ್ರ ನಿರ್ಧಾರ

ನವದೆಹಲಿ, ಡಿ. 16 (ಪಿಟಿಐ)– ಪ‍್ರಸ್ತುತ ಶತಮಾನದಂತ್ಯದ ವೇಳೆಗೆ ಅನಕ್ಷರತೆ ನಿರ್ಮೂಲನಕ್ಕೆ ಪಣ ತೊಟ್ಟ ಅನಕ್ಷರಸ್ಥರ ಸಂಖ್ಯೆ ಅತಿಯಾಗಿರುವ ಒಂಬತ್ತು ರಾಷ್ಟ್ರಗಳು ಈ ದಿಸೆಯಲ್ಲಿ ಕೈಗೊಳ್ಳಲಿರುವ ಶಿಕ್ಷಣ ಕಾರ್ಯಕ್ರಮಗಳಿಗೆ ಅಧಿಕ ಆರ್ಥಿಕ ನೆರವು ನೀಡುವಂತೆ ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಮನವಿ ಮಾಡಿದವು.

‘ಭಾರತಕ್ಕೆ ಲಾಭವೇ ಹೆಚ್ಚು’

ನವದೆಹಲಿ, ಡಿ. 16 (ಯುಎನ್‌ಐ)– ಉರುಗ್ವೆ ಒಪ್ಪಂದ ಮೂಲಕ ವಿಶ್ವ ವಾಣಿಜ್ಯವನ್ನು ವಿಸ್ತರಿಸುವುದರಿಂದ ಭಾರತಕ್ಕೆ ಹೆಚ್ಚು ಲಾಭ ಆಗುವುದೆಂಬುದು ಸರ್ಕಾರದ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT