ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನೀರಾವರಿ ಬಾಂಡ್‌ಗೆ ಒಪ್ಪಿಗೆ: ರಾಜ್ಯದ ವಾರ್ಷಿಕ ಯೋಜನೆ ಮೊತ್ತ 3275 ಕೋಟಿ

ವಾರ
Last Updated 14 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಕೃಷ್ಣಾ ನೀರಾವರಿ ಬಾಂಡ್‌ಗೆ ಒಪ್ಪಿಗೆ: ರಾಜ್ಯದ ವಾರ್ಷಿಕ ಯೋಜನೆ ಮೊತ್ತ 3275 ಕೋಟಿ ರೂ.

ನವದೆಹಲಿ, ಡಿ. 14– ಕರ್ನಾಟಕದ 1994–95ನೇ ಸಾಲಿನ ಯೋಜನೆ ಗಾತ್ರವು ಶೇಕಡಾ 8 ರಷ್ಟು ಹೆಚ್ಚಿದೆ; ಅಂದರೆ ವಾರ್ಷಿಕ ಯೋಜನೆಯ ಒಟ್ಟು ವೆಚ್ಚ 3,275 ಕೋಟಿ ರೂ. ಆಗಲಿದೆ. ಪ್ರಸಕ್ತ ವರ್ಷದ ಯೋಜನೆ ವೆಚ್ಚ 3025 ಕೋಟಿ ರೂ. ಆಗಿತ್ತು.

ಅತ್ಯಾಕರ್ಷಕ ವೈಮಾನಿಕ ಪ್ರದರ್ಶನ

ಬೆಂಗಳೂರು, ಡಿ. 14– ಭಾರತದಲ್ಲಿ ನಡೆಯುತ್ತಿರುವ ಪ್ರಥಮ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನ ‘ಏವಿಯಾ ಇಂಡಿಯಾ–93’ ನೀಡಲಿರುವ ಆವಿಸ್ಮರಣೀಯ ವೈಮಾನಿಕ ಕಸರತ್ತು–ಚಾಕಚಕ್ಯತೆಗೆ ಸಾಕ್ಷಿಯಾಗಲು ನಗರದ ಯಲಹಂಕದಲ್ಲಿನ ವಾಯುಪಡೆ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ನಾಳೆಯಿಂದ ನಾಲ್ಕು ದಿನಗಳ ಕಾಲ ಇಲ್ಲಿನ ವಾಯುಮಂಡಲವಿಡೀ ಕಸರತ್ತುಗಾರರ ಅಂಕೆಗೆ ಒಳಪಡಲಿದೆ.

ನೋಟೀಸಿಗೆ ಬಂಗಾರಪ್ಪ ಉತ್ತರ

ಮೈಸೂರು, ಡಿ. 14– ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಲಿ ತಮಗೆ ನೀಡಿದ್ದ ಷೋಕಾಸ್ ನೋಟೀಸಿಗೆ ಇಂದು ಉತ್ತರ ಕಳುಹಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಇಂದು ಇಲ್ಲಿ ಹೇಳಿದರು.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ ಆಧರಿಸಿ ಷೋಕಾಸ್ ನೋಟೀಸ್ ನೀಡಲಾಗಿತ್ತು. ಆ ಸಂದರ್ಶನವನ್ನು ಈಗಲೂ ನಾನು ಸಮರ್ಥಿಸುತ್ತೇನೆ’ ಎಂದರು.

‘ಯಾವ ರೀತಿ ಉತ್ತರ ನೀಡಿದ್ದೀರಿ?’ ಎಂಬ ಪ್ರಶ್ನೆಗೆ ಷೋಕಾಸ್ ನೋಟೀಸ್ ಗುಟ್ಟಿನ ಮಾದರಿಯಲ್ಲಿತ್ತು. ಉತ್ತರ ಕೂಡ ಅದೇ ರೀತಿಯಲ್ಲಿದೆ. ಅದರ ವಿವರಗಳನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT