ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 29–12–1993

Last Updated 28 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಜೆಪಿಸಿ ವರದಿ: ಸಂಸತ್ ಚರ್ಚೆ ಇಂದು

ನವದೆಹಲಿ, ಡಿ. 28– ಷೇರು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ಸಲ್ಲಿಸಿರುವ ವರದಿ ಸಂಸತ್ತಿನಲ್ಲಿ ಇಂದು ಚರ್ಚೆಗೆ ಬರುವುದು. ಹಣಕಾಸು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸಬಾರದು ಎಂದು
ಡಾ. ಮನಮೋಹನ್‌ಸಿಂಗ್ ಅವರಲ್ಲಿ ಈಗಾಗಲೇ ಮನವಿ ಮಾಡಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಈಗ ಈ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ದಾಳಿಯನ್ನೆದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ದೆಹಲಿ: ಪೊಲೀಸ್– ಕಾಂಗೈ ಬೀದಿ ಕಾಳಗ

ನವದೆಹಲಿ, ಡಿ. 28 (ಯುಎನ್‌ಐ)– ದೆಹಲಿ ವಿಧಾನಸಭೆಯ ಎದುರು ಇಂದು ಕಾಂಗೈ ಕಾರ್ಯಕರ್ತರು ಪೊಲೀಸರ ಜತೆ ನಡೆಸಿದ ಘರ್ಷಣೆಯಲ್ಲಿ 8 ಮಂದಿ ಪೊಲೀಸರು ಹಾಗೂ ಒಬ್ಬ ಪತ್ರಕರ್ತ ಸೇರಿ 15 ಜನ ಗಾಯಗೊಂಡರು.

ಮುಖ್ಯಮಂತ್ರಿಗೆ ಮನವಿ ಕೊಡುವುದಕ್ಕಾಗಿ ಸುಮಾರು 4 ಸಾವಿರ ಕಾಂಗೈ ಕಾರ್ಯಕರ್ತರು ಪೊಲೀಸ್ ಬಂದೋಬಸ್ತ್ ಮುರಿದು ಮುನ್ನುಗ್ಗಿ ಕಲ್ಲೆಸೆತ ನಡೆಸಿದಾಗ ಘರ್ಷಣೆ ಪ್ರಾರಂಭವಾಯಿತು. ಪೊಲೀಸರು 37 ಅಶ್ರುವಾಯು ಷೆಲ್‌ಗಳನ್ನು ಪ್ರಯೋಗಿಸಿದರು.

ಷೇರು ಹಗರಣದ ಹಣ ಪತ್ತೆಗೆ ಉನ್ನತ ಸಮಿತಿ

ನವದೆಹಲಿ, ಡಿ. 28 (ಪಿಟಿಐ) – ಸೆಕ್ಯುರಿಟಿ ಹಗರಣದ ಹಣ ಎಲ್ಲಿ ಹೋಗಿದೆ ಎಂಬುದನ್ನು ಪತ್ತೆ ಮಾಡಲು ಸರ್ಕಾರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿ ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT