ಇನ್ನೊಬ್ಬ ನೆಹರೂ ಲಂಡನ್, ಜುಲೈ 1– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ತಮ್ಮ ನಿಕಟ ಸಹವರ್ತಿಗಳಿಗೂ ರುಚಿಸದ ಬದಲಾವಣೆಗಳನ್ನು ಮಾಡಿ ತಾವು ‘ಇನ್ನೊಬ್ಬ ನೆಹರೂ’ ಎಂದು ತೋರಿಸಿಕೊಂಡಿದ್ದಾರೆ ಎಂಬುದು ಫೈನಾನ್ಷಿಯಲ್ ಟೈಮ್ಸ್ ಅಭಿಪ್ರಾಯ.
‘20 ವರ್ಷಗಳಿಗೂ ಹೆಚ್ಚು ಕಾಲ ನೆಹರೂರವರು ಪ್ರತಿಸ್ಪರ್ಧಿಗಳಿಲ್ಲದ ನಾಯಕರಾಗಿದ್ದರು. ಅವರನ್ನು ತನ್ನ ನೆರಳಿನಲ್ಲಿ ಬೇರೇನೂ ಬೆಳೆಯಲಾಗದ ಆಲದ ಮರಕ್ಕೆ ಹೋಲಿಸಲಾಗುತ್ತಿತ್ತು. ಈಗ ಶ್ರೀಮತಿ ಗಾಂಧಿಯವರು ತಂದೆಗಿಂತ ಕಡಿಮೆ ಚಾಣಾಕ್ಷರಲ್ಲ ವೆಂದು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದೆ.
ಟೆಲಿವಿಷನ್ ಪ್ರಸರಣದ ಉಪಕರಣ ತಯಾರಿಕೆ: ಬಿ.ಇ.ಎಲ್ ಯೋಜನೆ ಬೆಂಗಳೂರು, ಜುಲೈ 1– ಭಾರತದಲ್ಲಿ ಟೆಲಿವಿಷನ್ಗೆ ಹೆಚ್ಚುತ್ತಿರುವ ಬೇಡಿಕೆ ಯನ್ನು ಪೂರೈಸಲು ಸಂಬಂಧಿಸಿದ ಉಪಕರಣಗಳ ತಯಾರಿಕೆಗೆ ಬಿ.ಇ.ಎಲ್ ಉದ್ದೇಶಿಸಿದೆ.