ಅಸನ್ಸಾಲ್– ಪುರಿ ಪ್ಯಾಸೆಂಜರ್ ಡಿಕ್ಕಿ: 82 ಸಾವು– 130 ಮಂದಿಗೆ ಗಾಯ

ಕಟಕ್, ಜುಲೈ 15– ಇಲ್ಲಿಯ ಉತ್ತರಕ್ಕೆ 96 ಕಿಲೊ ಮೀಟರುಗಳ ದೂರದಲ್ಲಿನ ಜಾಜ್ಪುರ ರೋಡ್ ಸ್ಟೇಷನ್ನಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಗೂಡ್ಸ್ ಟ್ರೈನು ಮತ್ತು ಅಸನ್ಸಾಲ್ – ಪುರಿ ಪ್ಯಾಸೆಂಜರ್ ಡಿಕ್ಕಿಯಲ್ಲಿ 82 ಮಂದಿ ಸತ್ತು, ಕೊನೆಯ ಪಕ್ಷ 130 ಮಂದಿ ಗಾಯಗೊಂಡಿದ್ದಾರೆಂದು ಇಂದು ಬೆಳಿಗ್ಗೆ ಇಲ್ಲಿಗೆ ವರದಿ ಬಂದಿದೆ.

‘ಯಂಗ್ ಟರ್ಕ್ಸ್’

ಬೆಂಗಳೂರು, ಜುಲೈ 15– ಕಾಂಗ್ರೆಸ್ಸಿನ ಪ್ರಗತಿಪರ ವ್ಯಕ್ತಿಗಳ ಗುಂಪಿಗೆ ‘ಯಂಗ್ ಟರ್ಕ್ಸ್’ ಎಂಬ ನಾಮಕರಣ ಪತ್ರಿಕೆಗಳದ್ದು.

‘ಈ ನಾಮಕರಣ ನಮಗೆ ಅನ್ವಯಿಸುತ್ತಿದೆಯೇ?’ ಪತ್ರಿಕಾ ಸಂದರ್ಶನದಲ್ಲಿ ಈ ಪ್ರಶ್ನೆ ಕೇಳಿ ನಕ್ಕ ಶ್ರೀ ಚಂದ್ರಶೇಖರ್ ಅವರು, ‘ಬೇರೇನಾದರೂ ಹೆಸರಿಡಿ ನಾವು ಒಪ್ಪಿಕೊಳ್ಳುತ್ತೇವೆ’ ಎಂದರು.

‘ಈಗಿನ ಹೆಸರು ನಿಮಗೆ ಇಷ್ಟವೇ?’

‘ನೀವೇ ಇಟ್ಟ ಹೆಸರು, ನಿಮಗೇ ಹೆಚ್ಚು ಗೊತ್ತಿರಬೇಕು’ ಎಂದು ನಗು ಎಬ್ಬಿಸಿದರು ಶ್ರೀ ಚಂದ್ರಶೇಖರ್. ‘ಯಂಗ್ ಟರ್ಕ್ಸ್ ಎಂಬುದು ಶ್ರೀಸಾಮಾನ್ಯರಿಗೆ ಅರ್ಥವಾಗದ ಹೆಸರು. ನೀವು ಯಾರು? ನಿಮ್ಮ ಧ್ಯೇಯಗಳೇನು ಎಂಬುದು ಅವರಿಗೆ ತಿಳಿಯಬೇಕು. ಹೆಸರು ಬದಲಾಯಿಸುವುದು ಒಳ್ಳೆಯದಲ್ಲವೇ’ ಎಂದು ಪ್ರಶ್ನೆ ಹಾರಿತು.

ಚಂದ್ರಗ್ರಹಕ್ಕೆ ಮಾನವನ ಯಾನ ಇಂದು ಆರಂಭ

ಕೇಪ್ ಕೆನಡಿ, ಜುಲೈ 15– ನಾಳೆ ಚಂದ್ರಗ್ರಹಯಾನವನ್ನಾರಂಭಿಸಲಿರುವ ಅಪೋಲೋ 10ರ ಮೂವರು ಗಗನಯಾತ್ರಿಗಳೂ, ಚರಿತ್ರಾರ್ಹವಾದ ತಮ್ಮ ಯಾನವು ಯಶಸ್ವಿಯಾಗುವ ಭರವಸೆಯಿಂದ ಇಂದು ವಿಶ್ರಾಂತಿ ಪಡೆಯುತ್ತಿದ್ದಾರೆ.

ನಾಳೆ ಭಾರತೀಯ ಕಾಲಮಾನದಂತೆ ರಾತ್ರಿ 7 ಗಂಟೆ 2 ನಿಮಿಷಕ್ಕೆ ನಡೆಯಲಿರುವ ಚಂದ್ರಮಂಡಲ ಯಾನ ಯಶಸ್ವಿಯಾಗಲು ಸಾಧ್ಯವಾದ ಎಲ್ಲವನ್ನೂ ಮಾಡಲಾಗಿದೆ ಎಂದು ಗಗನಯಾತ್ರಿಗಳಾದ ನೀಲ್ ಆರಮ್ ಸ್ಟ್ರಾಂಗ್, ಎಡ್ವಿನ್ ಆಲ್ಡ್ರಿನ್ ಮತ್ತು ಮೈಕೆಲ್ ಕಾಲಿನ್ಸ್ರವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.