5ನೇ ಯೋಜನೆ ಧೋರಣೆ ಕರಡುವಿಗೆ ವ್ಯಾಪಕ ಸ್ವಾಗತ
ನವದೆಹಲಿ, ಜ. 19– ಐದನೇ ಯೋಜನೆಯ ಧೋರಣೆ ಕುರಿತು ಯೋಜನಾ ಆಯೋಗ ಸಿದ್ಧಪಡಿಸಿರುವ ಕರಡುವಿಗೆ ಇಂದು ಇಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಯ ಮೊದಲ ದಿನದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದ ಎಲ್ಲ ರಾಜ್ಯಗಳಿಂದಲೂ ಪೂರ್ಣ ಬೆಂಬಲ ದೊರಕಿತು.

ದಾರಿದ್ರ್ಯ ನಿವಾರಣೆ ಮತ್ತು ಸ್ವಾವಲಂಬನೆ ಸಾಧನೆಯ ಗುರಿಗಳನ್ನು ಮುಟ್ಟುವ ದೃಷ್ಟಿಯಿಂದ ರೂಪಿಸಿರುವ ಈ ಕರಡನ್ನು ಪರಿಶೀಲಿಸಲು, ಪ್ರಧಾನಿ ಇಂದಿರಾ ಗಾಂಧಿ ಅವರು ಅಧ್ಯಕ್ಷರಾಗಿರುವ ಈ ಮಂಡಲಿ ಸಭೆಯನ್ನು ಕರೆಯಲಾಗಿತ್ತು.

ಇಂದು ಹದಿನೆಂಟು ಜನ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು.

ಈ ವರ್ಷದಲ್ಲೇ ಐದು ಲಕ್ಷ ಶಿಕ್ಷಿತರಿಗೆ ಉದ್ಯೋಗ ಸೌಲಭ್ಯ
ನವದೆಹಲಿ, ಜ. 19– ಐದು ಲಕ್ಷ ಶಿಕ್ಷಿತ ನಿರುದ್ಯೋಗಿಗಳಿಗೆ 1973–74ನೇ ಸಾಲಿನಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಲು ಉದ್ದೇಶಿ ಸಲಾಗಿರುವುದೆಂದು ಯೋಜನೆ ಸಚಿವ ಡಿ.ಪಿ.ಧರ್ ಅವರು ಇಂದು ಇಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಗೆ ತಿಳಿಸಿದರು.

1974ರಿಂದ ಆರಂಭವಾಗಿ 1979ರಲ್ಲಿ ಅಂತ್ಯವಾಗುವ ಇಡೀ ಐದನೇ ಪಂಚವಾರ್ಷಿಕ ಯೋಜನೆಯ ಉದ್ದಕ್ಕೂ ಇದೇ ಪ್ರಮಾಣದಲ್ಲಿ ವಾರ್ಷಿಕವಾಗಿ ಉದ್ಯೋಗ ಕಲ್ಪಿಸಲಾಗುವುದೆಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.