‘ಪುಂಡತನದಿಂದ ಪ್ರತ್ಯೇಕರಾಜ್ಯದ ಗುರಿ ಈಡೇರದು’
ಹೈದರಾಬಾದ್, ಫೆ. 14– ಪುಂಡಾಟಿಕೆ ಯಿಂದ ಪ್ರತ್ಯೇಕ ರಾಜ್ಯದ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು, ಪಾದರಕ್ಷೆ ಮತ್ತು ಕಲ್ಲುಗಳನ್ನುಎಸೆಯುವುದರಲ್ಲಿ ನಿರತರಾಗಿದ್ದಉದ್ರಿಕ್ತಪೂರ್ಣ ತೆಲಂಗಾಣ ಪ್ರದರ್ಶನಕಾರರಿಗೆ ಇಂದು ಎಚ್ಚರಿಕೆ ನೀಡಿದರು.

ಸಮಾಜವಾದ ಮತ್ತು ಬಲಪಂಥೀಯ ಪ್ರತಿಗಾಮಿಗಳ ನಡುವಣ ಹೋರಾಟವೇ ಈ ಮಧ್ಯಂತರ ಚುನಾವಣೆಯಾದ್ದರಿಂದ, ಪ್ರತ್ಯೇಕ ರಾಜ್ಯದ ಬಗ್ಗೆ ಜನಗಳ ಮನಸ್ಸನ್ನು ಕೆರಳಿಸಿ ಮೂಲಭೂತ ರಾಷ್ಟ್ರೀಯ ಸಮಸ್ಯೆಗಳ ಮೇಲೆ ತೆರೆ ಎಳೆಯಬಾರದೆಂದೂ ಅವರುಮನವಿ ಮಾಡಿಕೊಂಡರು.

ಭಾರತದ ವಿರುದ್ಧ ಭದ್ರತಾಮಂಡಳಿಗೆ ಪಾಕ್ ದೂರು
ನವದೆಹಲಿ, ಫೆ. 14– ಪಾಕಿಸ್ತಾನದ ಮಿಲಿಟರಿ ಮತ್ತು ಸಿವಿಲ್ ವಿಮಾನಗಳು ಭಾರತದ ಪ್ರದೇಶದ ಮೇಲೆ ಯಾನ ಮಾಡುವುದನ್ನು ಭಾರತ ಸರ್ಕಾರ ನಿಷೇಧಿಸಿರುವ ಬಗ್ಗೆ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆದೂರು ಕೊಟ್ಟಿದೆ.

ಈ ನಿಷೇಧ ಕ್ರಮದಿಂದ ಭಾರತವು ಅಂತರರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆಯೆಂದು ಪಾಕಿಸ್ತಾನ ದೂರು ಪತ್ರದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.