ಅಪೀಲು ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ, ಮಾರ್ಚ್ 2– ಆಡಳಿತ ಕಾಂಗ್ರೆಸ್ ಪಕ್ಷ ಚುನಾವಣೆ ಉದ್ದೇಶಗಳಿಗಾಗಿ ಸರ್ಕಾರಿ ಯಂತ್ರ ಬಳಸುವುದನ್ನು ತಡೆಗಟ್ಟುವಂತೆ ಕೋರಿ ಐದು ವಿರೋಧ ಪಕ್ಷಗಳು ಇಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವು.

ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಆರು ಜನರ ವಿರುದ್ಧ ಈ ಸಂಬಂಧ ಸಲ್ಲಿಸಿದ್ದ ಅರ್ಜಿಯೊಂದನ್ನು ದೆಹಲಿ ಹೈಕೋರ್ಟ್ ಕಳೆದ ಮಂಗಳವಾರ ವಜಾ ಮಾಡಿತ್ತು. ದೆಹಲಿ ಹೈಕೋರ್ಟಿನ ಈ ತೀರ್ಪಿನ ವಿರುದ್ಧ ಐದು ವಿರೋಧ ಪಕ್ಷಗಳು ಈಗ ಸುಪ್ರೀಂ ಕೋರ್ಟಿಗೆ ಅಪೀಲು ಅರ್ಜಿ ಸಲ್ಲಿಸಿವೆ. ಈ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆತ್ತಿಕೊಳ್ಳಬೇಕೆಂದು ಅರ್ಜಿದಾರರ ಪರ ವಕೀಲರು ಮಾಡಿ ಕೊಂಡ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು.

ಬಿರುಸಿನ ಭಿತ್ತಿಪತ್ರ ಸಮರ

ಬೆಂಗಳೂರು, ಮಾರ್ಚ್ 2– ಲೋಕಸಭಾ ಚುನಾವಣೆಗಾಗಿ ಮಾರ್ಚ್ 7ರಂದು ಮತಗಟ್ಟೆಗೆ ಹೋಗುವ ಬೆಂಗಳೂರಿನಲ್ಲಿ ಭಿತ್ತಿಪತ್ರಗಳ ಸಮರ ಇನ್ನೂ ಬಿರುಸಾಗಿಯೇ ನಡೆದಿದೆ.

ಜನಸಂಘದ ವ್ಯಂಗ್ಯಚಿತ್ರಗಳಿಗೆದುರಾಗಿ, ಆಡಳಿತ ಕಾಂಗ್ರೆಸ್ಸು ಬೃಹತ್ ಚಿತ್ರಗಳನ್ನು ನಿಲ್ಲಿಸತೊಡಗಿದೆ. ಶ್ರೀ ಹನುಮಂತಯ್ಯನವರ ಪರವಾಗಿ ಪ್ರಚಾರಕ್ಕಿಳಿದಿರುವ ಡಿ.ಎಂ.ಕೆ ನೂರಾರು ಭಿತ್ತಿಪತ್ರಗಳನ್ನು ಗೋಡೆಗಳಿಗೇರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.