ಭಾನುವಾರ, ಜನವರಿ 17, 2021
19 °C

50 ವರ್ಷಗಳ ಹಿಂದೆ: ಬುಧವಾರ, 28–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡ್ಡಿಯಾಗದ ಸ್ತ್ರೀತ್ವ

ವಿಶ್ವ ರಾಷ್ಟ್ರಸಂಸ್ಥೆ, ಅ. 27– ‘ನನ್ನ ಸ್ತ್ರೀತ್ವ ಯಾವೊಂದು ಕೆಲಸ ಮಾಡಲೂ ಅಡ್ಡಿ ಬಂದಿಲ್ಲ ಅಥವಾ ಯಾವ ಕೆಲಸ ಮಾಡುವಂತೆಯೂ ಬಲಾತ್ಕರಿಸಿಲ್ಲ’ ಎಂದು ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ನಿನ್ನೆ ಪ್ರಸಾರವಾದ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

‘ಅಮೆರಿಕದಲ್ಲಿ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಅಧಿಕಾರ ವಹಿಸಿಕೊಳ್ಳಲು ಇರುವ ತೊಂದರೆಯೆಂದರೆ, ಪುರುಷರು ಹಾಗೂ ಮಹಿಳೆಯರು ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹೊಂದಿರುವುದು’ ಎಂದು ತಾವು ಭಾವಿಸುವುದಾಗಿ ಅವರು ತಿಳಿಸಿದ್ದಾರೆ.

ಕಾವೇರಿ ಜಲ ವಿವಾದ ಮಾತುಕತೆ ವಿಫಲ

ಮದ್ರಾಸ್, ಅ. 27– ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಮೈಸೂರು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ಇಂದು ನಡೆದ ಮಾತುಕತೆಗಳು ವಿಫಲಗೊಂಡವು.

ತಮಿಳುನಾಡು, ಮೈಸೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇರಳದ ಲೋಕೋಪಯೋಗಿ ಸಚಿವರ ನಡುವೆ ನಡೆದ ಮಾತುಕತೆಯ ನಂತರ ಕೇರಳ ಸಚಿವ ಟಿ.ಕೆ.ದಿವಾಕರನ್ ಅವರು ‘ಒಪ್ಪಂದವಾಗಲಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು