ಭಾನುವಾರ, ಏಪ್ರಿಲ್ 18, 2021
31 °C

50 ವರ್ಷಗಳ ಹಿಂದೆ: ಶನಿವಾರ, 6–3–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

114 ಕ್ಷೇತ್ರಗಳಲ್ಲಿ ಶೇ 50ರಷ್ಟು ಮತದಾನ

ನವದೆಹಲಿ, ಮಾರ್ಚ್ 5– ಎಂಟು ರಾಜ್ಯಗಳಲ್ಲಿ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 114 ಕ್ಷೇತ್ರಗಳಲ್ಲಿ ಐದನೇ ದಿನವಾದ ಇಂದು ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು ಆರೂವರೆ ಕೋಟಿ ಮತದಾರರಲ್ಲಿ ಶೇ 50ರಷ್ಟು ಮಂದಿ ಮತದಾನ ಮಾಡಿದರು.

ಆಂಧ್ರಪ್ರದೇಶ ಮತ್ತು ಬಿಹಾರದ ಎರಡು ಕಡೆ ಸಣ್ಣಪುಟ್ಟ ಘಟನೆಗಳ ವಿನಾ ಉಳಿದೆಡೆ ಮತದಾನ ಶಾಂತಿಯುತವಾಗಿ ನಡೆಯಿತು.

ರಾಜ್ಯದ ಹಿಂದುಳಿದ ವರ್ಗಗಳ ಸ್ಥಿತಿಗತಿ ಪರಿಶೀಲಿಸಲು ಆಯೋಗ ರಚನೆಗೆ ಕರೆ

ಬೆಂಗಳೂರು, ಮಾರ್ಚ್ 5– ರಾಜ್ಯಾಂಗದತ್ತ ರಕ್ಷಣೆ ಹೊಂದಿರುವ ನಿಮ್ನ ವರ್ಗ ಮತ್ತು ಗುಡ್ಡಗಾಡಿನ ಜನರನ್ನು ಬಿಟ್ಟು ಮೈಸೂರು ರಾಜ್ಯದಲ್ಲಿ ಇತರ ಹಿಂದುಳಿದ ಮತ್ತು
ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ವರದಿ ಮಾಡಲು ಆಂಧ್ರಪ್ರದೇಶದಂತೆ ಆಯೋಗವೊಂದನ್ನು ರಚಿಸಬೇಕೆಂದು ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಸಂಘ ರಾಜ್ಯ ಸರ್ಕಾರವನ್ನು ಕೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು