ಬುಧವಾರ, ಆಗಸ್ಟ್ 10, 2022
20 °C
50 ವರ್ಷಗಳ ಹಿಂದೆ ಸೋಮವಾರ 14.6.1971

50 ವರ್ಷಗಳ ಹಿಂದೆ: ಸೋಮವಾರ 14.6.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಷಣದಲ್ಲಿ ಜಾತ್ಯತೀತತೆ,
ಕೃತಿಯಲ್ಲಿ ಸ್ವಜಾತಿ ಹಿತದ ರಕ್ಷಣೆ ಪ್ರವೃತ್ತಿಯ ಖಂಡನೆ

ಬೆಂಗಳೂರು, ಜೂನ್ 13– ವೇದಿಕೆಯ ಮೇಲೆ ಜಾತ್ಯತೀತ ತತ್ವ ಕುರಿತು ಭಾಷಣ ಮಾಡಿ, ಅಧಿಕಾರ ಬಂದ ಮೇಲೆ ತಮ್ಮ ಜಾತಿಯವರ ಯೋಗಕ್ಷೇಮ ಮಾತ್ರವನ್ನೇ ನೋಡಿಕೊಳ್ಳುವ ರಾಜಕಾರಣಿಗಳನ್ನು ಪ್ರದೇಶ ಕಾಂಗ್ರೆಸ್ ಸಮಿತಿ (ಹಂಗಾಮಿ) ಸಂಚಾಲಕ ಶ್ರೀ ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ತರಾಟೆಗೆ ತೆಗೆದುಕೊಂಡರು.

ಪುರಭವನದಲ್ಲಿ ಅಖಿಲ ಮೈಸೂರು ನಾಯಕ ಜನಾಂಗದ ಮಹಾಸಮ್ಮೇಳನವನ್ನು ಉದ್ಘಾಟಿಸಿದ ಅವರು, ಹಿಂದುಳಿದ ವರ್ಗಗಳ ರಾಜಕೀಯ ಜಾಗೃತಿಗೆ ಕರೆಯಿತ್ತರು.

‘ಈ ಮಹತ್ಕಾರ್ಯ ಸಾಧನೆಗೆ’ ಒಗ್ಗಟ್ಟು ಮತ್ತು ಶಿಸ್ತು ಅಗತ್ಯವೆಂದು ಶ್ರೀ ಅರಸು ಸ್ಪಷ್ಟಪಡಿಸಿದರು.

ಪಕ್ಷಾಂತರ ಕಾರಣ ಪ್ರಕಾಶ ಸಿಂಗ್ ಬಾದಲ್ ಸಂಪುಟದ ರಾಜೀನಾಮೆ

ಚಂಡೀಗಡ, ಜೂನ್ 13– ಮುಖ್ಯಮಂತ್ರಿ ಶ್ರೀ ಪ್ರಕಾಶ ಸಿಂಗ್ ಬಾದಲ್ ಅವರ ಶಿಫಾರಸಿನ ಮೇರೆಗೆ ಪಂಜಾಬ್ ರಾಜ್ಯದ ವಿಧಾನಸಭೆಯನ್ನು ರಾಜ್ಯಪಾಲ
ಡಾ. ಡಿ.ಸಿ. ಪಾವಟೆ ಅವರು ಇಂದು ವಿಸರ್ಜಿಸಿದರು.

ಬಾದಲ್ ಮಂತ್ರಿಮಂಡಲಕ್ಕೆ ಬೆಂಬಲ ಕೊಡುವುದನ್ನು ಹಿಂತೆಗೆದುಕೊಂಡರು. ವಿರೋಧಿ ಅಕಾಲಿದಳ ರಚಿಸಲು 18 ಮಂದಿ ಅಕಾಲಿ ಶಾಸಕರು ನಿರ್ಧಾರ ಕೈಗೊಂಡ ಒಂದು ಗಂಟೆಯೊಳಗೆ ಈ ಪ್ರಕಟಣೆ ಹೊರಬಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು