ಗುರುವಾರ , ಸೆಪ್ಟೆಂಬರ್ 23, 2021
24 °C

50 ವರ್ಷಗಳ ಹಿಂದೆ: ಗುರುವಾರ 05-08-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ: ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ದಾವಾ

ನವದೆಹಲಿ, ಆ. 4– ಕಾವೇರಿ ನದಿ ನೀರು ಕುರಿತು ತಮಿಳುನಾಡು ಸರ್ಕಾರವು ಇಂದು ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆ ಹೂಡಿ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಒಂದು ‘ವಿವಾದ’ ಎದ್ದಿದೆಯೆಂದು ಘೋಷಿಸುವಂತೆ ಕೋರಿತು.

ವಿವಾದದ ವ್ಯಾಪ್ತಿಯಲ್ಲಿರುವ ನದಿ ಯೋಜನೆಗಳನ್ನು ಮೈಸೂರು ಸರ್ಕಾರ ಮುಂದುವರಿಸದಂತೆ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಬೇಕೆಂದೂ ಅದು ಕೋರಿದೆ.

ಸಾಮಾಜಿಕ–ಆರ್ಥಿಕ ಪ್ರಗತಿಗೆ ಒಡ್ಡಿದ ಅಡ್ಡಿ ನಿವಾರಿಸುವುದೇ ಸಂವಿಧಾನ ಮಸೂದೆ ಉದ್ದೇಶ

ನವದೆಹಲಿ, ಆ. 4– ಗೋಲಕ್‌ನಾಥ್ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟು ನೀಡಿದ ತೀರ್ಪು ದೇಶದಲ್ಲಿನ ಸಾಮಾಜಿಕ–ಆರ್ಥಿಕ ಪ್ರಗತಿಗೆ ಭಾರಿ ಅಡಚಣೆಯುಂಟು ಮಾಡಿದೆ. ಕೇವಲ ಈ ಅಡಚಣೆಯನ್ನು ನಿವಾರಿಸುವುದೇ ಸಂವಿಧಾನದ (24ನೇ ತಿದ್ದುಪಡಿ) ಮಸೂದೆಯ ಉದ್ದೇಶ ಎಂದು ಕಾನೂನು ಸಚಿವ ಶ್ರೀ ಎಚ್‌.ಆರ್. ಗೋಖಲೆ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.

ಈ ಮಸೂದೆಯ ಬಗ್ಗೆ ನಡೆದ ಚರ್ಚೆಗೆ ಉತ್ತರವೀಯುತ್ತಿದ್ದ ಗೋಖಲೆಯವರು, ‘ಭಾರತದ ಜನರು ತೀವ್ರ ಸಾಮಾಜಿಕ– ಆರ್ಥಿಕ ಬದಲಾವಣೆಗೆ ಒತ್ತಾಯ ಮಾಡುತ್ತಿ ದ್ದರು. ಈ ವಿಷಯದಲ್ಲಿ ಯಾವುದೇ ವಿಳಂಬ ವನ್ನೂ ಅವರು ಕ್ಷಮಿಸಲಾರರು’ ಎಂದು ನುಡಿದಾಗ ಸಭೆಯಲ್ಲಿ ಹರ್ಷೋದ್ಗಾರಗಳಾದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು