ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ, 1–11–1972

Last Updated 31 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ರಾಜ್ಯ ಪ್ರಶಸ್ತಿ ವಿಜೇತರು

ಬೆಂಗಳೂರು, ಅ.31– ನಾನಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಈ ಬಾರಿ ಒಟ್ಟು 14 ಮಂದಿಗೆ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಪ್ರಶಸ್ತಿ ವಿಜೇತರಲ್ಲಿ ಹೆಸರಾಂತ ಸಂಗೀತ ಕಲಾವಿದ ಶ್ರೀ ತಿಟ್ಟೆ ಕೃಷ್ಣಯ್ಯಂಗಾರ್‌, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ.ನಾರಾಯಣ ಮತ್ತು ಕವಿ ಕೆ.ಎಸ್‌.ನರಸಿಂಹ ಸ್ವಾಮಿ ಅವರೂ ಬ.

ಜನತೆಯ ಸಹಕಾರ ಯಾಚನೆ

‘ಹೆಚ್ಚು ಕಷ್ಟಕರವಾಗಿರುವ ಪರಿಸ್ಥಿತಿಯನ್ನು ಎದುರಿಸಲು ನಿಮ್ಮ ಸಹಕಾರ–ಸಹಾನುಭೂತಿ ಕೊಡಿ’ –ಇದೇ ರಾಜ್ಯದ ಮುಖ್ಯಮಂತ್ರಿ ಆಜಾನುಬಾಹು ಅರಸು ಜನತೆಗೆ ನೀಡಿದ ಕನ್ನಡ ರಾಜ್ಯೋತ್ಸವ ಸಂದೇಶ.

ಸಂದರ್ಭ: ಪ್ರಜಾವಾಣಿಗೆ ನೀಡಿದ ವಿಶೇಷ ಸಂದರ್ಶನ.

ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಜನತೆಗೆ ಕೋರಿದರು.

‘ಈಗ ದೇಶದ ಪರಿಸ್ಥಿತಿ ಹೆಚ್ಚು ಕಷ್ಟಕರವಾಗಿದೆ, ಈ ಪರಿಸ್ಥಿತಿಯನ್ನು ನಾವು ಎದುರಿಸಿ ನಮ್ಮ ಗುರಿಯನ್ನು ಸಾಧನೆ ಮಾಡುವ ದಾರಿಯಲ್ಲಿ ಸಾಗಬೇಕಾದರೆ ಜನತೆಯ ಹೆಚ್ಚು ಪ್ರಮಾಣದ ಸಹಕಾರ, ಸಹಾನುಭೂತಿ ಸರ್ಕಾರಕ್ಕೆ ಬೇಕಾಗಿದೆ. ಈ ಕನ್ನಡ ರಾಜ್ಯ ಚೆನ್ನಾಗಿ ಅಭಿವೃದ್ಧಿಯಾಗ ಬೇಕಾದದ್ದು ನಮ್ಮೆಲ್ಲರ ಆಶೋತ್ತರವಿರುವಾಗ ಈ ಸಹಕಾರವನ್ನು ನಾನು ಬಹುದೊಡ್ಡ ಪ್ರಮಾಣದಲ್ಲಿ ನಮ್ಮ ಜನತೆಯಿಂದ ನಿರೀಕ್ಷೆ ಮಾಡುತ್ತಿದ್ದೇನೆ. ಕೊಡಬೇಕು ಎನ್ನುವುದೇ ಸಂದೇಶ. ಇದೇ ಅವರನ್ನು ಕೇಳಿಕೊಳ್ಳುವುದು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT