ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುಜರಾತಿನಲ್ಲಿ ಇನ್ನೊಬ್ಬ ಸಚಿವರ ರಾಜೀನಾಮೆ

Published 9 ಫೆಬ್ರುವರಿ 2024, 1:03 IST
Last Updated 9 ಫೆಬ್ರುವರಿ 2024, 1:03 IST
ಅಕ್ಷರ ಗಾತ್ರ

ಗುಜರಾತಿನಲ್ಲಿ ಇನ್ನೊಬ್ಬ ಸಚಿವರ ರಾಜೀನಾಮೆ: ಮತ್ತಷ್ಟು ಬಿಕ್ಕಟ್ಟು

ಅಹಮದಾಬಾದ್‌, ಫೆ. 8– ರಾಜ್ಯದಲ್ಲಿ ಹಿಂಸಾಸ್ವರೂಪ ತಾಳಿರುವ ಆಹಾರ ಗಲಭೆ
ಗಳು ಅಡಗುತ್ತಿರುವ ಸೂಚನೆಗಳು ಕಾಣುತ್ತಿರುವಂತೆಯೇ ಮತ್ತೊಬ್ಬ ಸಚಿವರ ರಾಜೀ
ನಾಮೆಯಿಂದಾಗಿ ಚಿಮನ್‌ಭಾಯಿ ಪಟೇಲರ ಸಂಪುಟ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ.

ವಿದ್ಯಾರ್ಥಿ ಪ್ರದರ್ಶನಕಾರರ ವಿರುದ್ಧ ಪೊಲೀಸರ ದಬ್ಬಾಳಿಕೆ ಹಾಗೂ ಹದ್ದುಮೀರಿದ ವರ್ತನೆಯನ್ನು ಪ್ರತಿಭಟಿಸಿ ಶಿಕ್ಷಣ ಖಾತೆ ರಾಜ್ಯ ಸಚಿವ ಮಗನ್‌ಭಾಯಿ ಆರ್‌. ಬಾರೋಟ್‌ ಅವರು ಇಂದು ಚಿಮನ್‌ಭಾಯಿ ಪ‍ಟೇಲ್‌ ನಾಯಕತ್ವದ ಗುಜರಾತ್‌ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

ಚಿಮನ್‌ಭಾಯಿ ಪಟೇಲ್ ಅವರು ನಿನ್ನೆ ನಾಲ್ವರು ಸಚಿವರನ್ನು ವಜಾ ಮಾಡಿದರು. ಇದರಿಂದಾಗಿ 21 ಸಚಿವರ ರಾಜ್ಯ ಸಂಪುಟದ ಬಲ ಈಗ ಹದಿನಾರಕ್ಕಿಳಿದಿದೆ.

ಮಹಾರಾಷ್ಟ್ರದಲ್ಲಿ ನೊಂದ ಕನ್ನಡಿಗರಿಗೆ ಪರಿಹಾರ ನೀಡಿಕೆ

ಬೆಂಗಳೂರು, ಫೆ. 8– ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆದ ಗಲಭೆಯಲ್ಲಿ ನೊಂದವರಿಗೆ ಪರಿಹಾರ ನೀಡುವ ಕ್ರಮ ಆರಂಭವಾಗಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ (ಸಂಸ್ಥಾ) ಅಧ್ಯಕ್ಷ ಶ್ರೀ ವೀರೇಂದ್ರ ಪಾಟೀಲರಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಭಾವೈಕ್ಯ ಮಂಡಳಿ ಸಭೆ ಕರೆಯಬೇಕು ಹಾಗೂ ನೊಂದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪಾಟೀಲ್‌, ಪ್ರಧಾನಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT