ತನಿಖಾ ನಿರ್ಣಯ ಚರ್ಚೆಗೆ ಸರ್ಕಾರದ ಒಪ್ಪಿಗೆ: ವಿರೋಧಪಕ್ಷಕ್ಕೆ ಜಯ

ನವದೆಹಲಿ, ಸೆ. 6– ಆಮದು ಲೈಸೆನ್ಸ್ ಪ್ರಕರಣದ ಬಗ್ಗೆ ಸಂಸದೀಯ ತನಿಖೆ ನಡೆಸಬೇಕೆಂಬ ವಿರೋಧ ಪಕ್ಷದ ನಿರ್ಣಯ ಕುರಿತು ಲೋಕಸಭೆ ಚರ್ಚೆಗೆ ಸರ್ಕಾರ ಇಂದು ಒಪ್ಪಿಕೊಂಡಿದ್ದು ವಿರೋಧ ಪಕ್ಷಕ್ಕೆ ಭಾರೀ ಜಯವುಂಟಾಯಿತು.

ಲೋಕಸಭೆಯ ಕಲಾಪಗಳನ್ನೆಲ್ಲ ಮುಂದಕ್ಕೆ ಹಾಕುವ ಅಪರೂಪ ಕ್ರಮ ಕೈಗೊಂಡ ಸಭಾಧ್ಯಕ್ಷರು ಕಲಾಪ ಸಲಹಾ ಸಮಿತಿಯ ತೊಂಬತ್ತು ನಿಮಿಷದ ಸಭೆ ನಡೆಸಿದ ನಂತರ ನಿರ್ಣಯ ಕುರಿತು ಚರ್ಚೆಗೆ ಸರ್ಕಾರ ಒಪ್ಪಿರುವುದನ್ನು ಪ್ರಕಟಿಸಿದರು.

ಪ್ರಧಾನಿ ನಿವಾಸದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಸಂಪುಟದ ಹಿರಿಯ ಸದಸ್ಯರ ಸಭೆಯನ್ನು ಅನುಸರಿಸಿ ಲೈಸೆನ್ಸ್ ಹಗರಣದ ಬಗ್ಗೆ ಸಂಸದೀಯ ತನಿಖೆಗೆ ವಿರೋಧ ಪಕ್ಷದ ಬೇಡಿಕೆ ವಿಷಯದಲ್ಲಿ ಸರ್ಕಾರ ತನ್ನ
ಬಿಗಿಧೋರಣೆಯನ್ನು ಸಡಿಲಿಸಿದೆ.

ಭಾರತದ ಉದ್ದೇಶದ ಬಗ್ಗೆ ತನಗೆ ಯಾವುದೇ ಶಂಕೆ ಇಲ್ಲ: ನೇಪಾಳ

ನವದೆಹಲಿ, ಸೆ. 6– ಸಿಕ್ಕಿಂಗೆ ಸಹ ಸದಸ್ಯ ಸ್ಥಾನಮಾನ ನೀಡುವ ಭಾರತದ ನಿರ್ಧಾರದ ಬಗ್ಗೆ ಕಳೆದ ಎರಡು ದಿನಗಳಿಂದ ಉಗ್ರ ಪ್ರದರ್ಶನ ನಡೆಸಿದ ನಂತರ ಭಾರತದ ಉದ್ದೇಶದ ಬಗ್ಗೆ ತನಗೆ ಯಾವುದೇ ಭೀತಿ ಇಲ್ಲವೆಂದು ನೇಪಾಳ ಭಾರತಕ್ಕೆ ಆಶ್ವಾಸನೆ ನೀಡಿದೆ.

ಭಾರತದ ರಾಯಭಾರಿ ಎಂ.ಕೆ.ರಸಗೋತ್ರ ಅವರು ಇಂದು ಕಠ್ಮಂಡುವಿನಲ್ಲಿ ನೇಪಾಳದ ವಿದೇಶಾಂಗ ಸಚಿವ ಜ್ಞಾನೇಂದ್ರ ಬಹಾದೂರ್ ಕರ್ಕಿ ಅವರನ್ನು ಭೇಟಿ ಮಾಡಿದಾಗ ಈ ಆಶ್ವಾಸನೆ ನೀಡಲಾಯಿತು.

ಭಾರತ ವಿರೋಧಿ ಪ್ರದರ್ಶನಗಳ ವಿರುದ್ಧ ಪೂರ್ಣ ಕ್ರಮ ಕೈಗೊಳ್ಳಲಾಗುವುದೆಂದೂ ನೇಪಾಳ ಸರ್ಕಾರ ಭಾರತಕ್ಕೆ ಆಶ್ವಾಸನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.