ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಈ ದಿನ|ಅಧಿವೇಶನದಲ್ಲಿ ‘ಕರ್ನಾಟಕ’ ನಾಮಕರಣ

50 ವರ್ಷಗಳ ಹಿಂದೆ ಈ ದಿನ ಜುಲೈ 13
Published 12 ಜುಲೈ 2023, 19:44 IST
Last Updated 12 ಜುಲೈ 2023, 19:44 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ನಲ್ಲಿ ಅಧಿಕಾರಿ ಮಟ್ಟದ ಸಭೆ: ಭಾರತದ ಒಪ್ಪಿಗೆ

ನವದೆಹಲಿ, ಜುಲೈ 12– 1971ರ ಯುದ್ಧದಿಂದ ಉದ್ಭವಿಸಿರುವ ಮಾನವೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಭಾರತ ಮತ್ತು ಪಾಕಿಸ್ತಾನದ ಉನ್ನತ ಪ್ರತಿನಿಧಿಗಳು ಈ ತಿಂಗಳ 24ರಂದು ಇಸ್ಲಾಮಾಬಾದ್‌ನಲ್ಲಿ ಸಭೆ ಸೇರುವರು.

ಈ ಮಾತುಕತೆಯು ಎರಡು ಅಥವಾ ಮೂರು ದಿನಗಳ ಕಾಲ ನಡೆಯುವ ನಿರೀಕ್ಷೆ ಇದೆ. 

ಪ್ರಧಾನಿ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಎನ್‌. ಹಕ್ಸರ್‌ ಅವರು ಈ ಮಾತುಕತೆಯಲ್ಲಿ ಭಾಗವಹಿಸುವ ಭಾರತ ನಿಯೋಗದ ನಾಯಕರು.

ಪಾಕಿಸ್ತಾನದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಜೀಜ್‌ ಅಹ್ಮದ್‌ ಅವರು ಮಾತುಕತೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ನಿಯೋಗದ ನಾಯಕರು. ಭಾರತ ಮತ್ತು ಪಾಕಿಸ್ತಾನ ತುರ್ತು ಪತ್ರ ವ್ಯವಹಾರ ನಡೆಸಿದ ಬಳಿಕ ಮಾತುಕತೆಯ ಸ್ಥಳ ಹಾಗೂ ದಿನ ನಿರ್ಧಾರವಾಯಿತು.

ಮುಂದಿನ ಸಂಸತ್‌ ಅಧಿವೇಶನದಲ್ಲಿ ‘ಕರ್ನಾಟಕ’ ನಾಮಕರಣ

ಬೆಂಗಳೂರು, ಜುಲೈ 12– ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಾಯಿಸುವ ಸಂವಿಧಾನದ ತಿದ್ದುಪಡಿ ವಿಧೇಯಕ ಅಂಗೀಕಾರವಾಗಲಿದೆ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ರಾಜ್ಯದ ಹೆಸರನ್ನು ಬದಲಾಯಿಸುವ ಕಾರ್ಯವನ್ನು ಮುಂದಕ್ಕೆ ಹಾಕಲಾಗುವು
ದೆಂದು ಎದ್ದಿರುವ ಊಹಾಪೋಹವನ್ನು ಮುಖ್ಯಮಂತ್ರಿ ಅಲ್ಲಗಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT