ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಈ ದಿನ: ಹಾಸನ–ಮಂಗಳೂರು ರೈಲು ಮಾರ್ಗ ಪೂರ್ಣ

Published 19 ಫೆಬ್ರುವರಿ 2024, 19:08 IST
Last Updated 19 ಫೆಬ್ರುವರಿ 2024, 19:08 IST
ಅಕ್ಷರ ಗಾತ್ರ

ಮುಂಬೈ ಆಚೆ ಸಾಗರ ತಳದಲ್ಲಿ ತೈಲೋದ್ಭವ: ಉತ್ತಮ ನಿಕ್ಷೇಪ ಪತ್ತೆ

ನವದೆಹಲಿ, ಫೆ. 19– ಮುಂಬೈ ಆಚೆ ಕ್ಯಾಂಬೇ ಸಮುದ್ರದಾಳದಲ್ಲಿ ತೋಡಲಾದ ಮೊದಲ ಬಾವಿಯಲ್ಲೇ ಇಂದು ಪೆಟ್ರೋಲಿಯಂ ತೈಲ ಉದ್ಭವಿಸಿತು. ಹದಿಮೂರು ಕೋಟಿ ರೂ. ವೆಚ್ಚದ ‘ಸಾಗರ ಸಾಮ್ರಾಟ್’ ತೈಲಾನ್ವೇಷಕ ನೌಕೆ ಸಿಬ್ಬಂದಿಯ ಹದಿನಾಲ್ಕು ದಿನಗಳ ಶ್ರಮ ಫಲಿಸಿತು.

ವಿಶ್ವ ತೈಲ ಬಿಕ್ಕಟ್ಟಿನ ಬಿಸಿಗೆ ತಾನೂ ತುತ್ತಾಗಿರುವ ಭಾರತದ ಪಾಲಿಗೆ ಮುಂಬೈ ಬಳಿ ತೈಲೋದ್ಭವವಾಗಿರುವುದು ಸಂತಸ ತಂದ ಸಂಗತಿ.

1976ರ ವೇಳೆಗೆ ಹಾಸನ–ಮಂಗಳೂರು ರೈಲು ಮಾರ್ಗ ಪೂರ್ಣ

ನವದೆಹಲಿ, ಫೆ. 19– 1964ನೇ ನವೆಂಬರ್‌ ನಲ್ಲಿ ಮಂಜೂರಾದ ಹಾಸನ–ಮಂಗಳೂರು ರೈಲು ಮಾರ್ಗ ಯೋಜನೆಯು 3,587 ಲಕ್ಷ ರೂ. ವೆಚ್ಚದಲ್ಲಿ 1976ನೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದೆಂದು ರೈಲ್ವೆ ಖಾತೆ ಉಪಸಚಿವ ಮಹಮದ್ ಷಫಿ ಕುರೇಷ್ ಅವರು ಲೋಕಸಭೆಯಲ್ಲಿ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT