ಸೋಮವಾರ, ಆಗಸ್ಟ್ 8, 2022
23 °C

50 ವರ್ಷಗಳ ಹಿಂದೆ: 30–6–1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಜನ ಕೂಟದಲ್ಲಿ ಇಂದಿರಾ – ಭುಟ್ಟೊ ವಿಚಾರ ವಿನಿಮಯ

ಸಿಮ್ಲಾ, ಜೂನ್‌ 29 – ಉಪಖಂಡದಲ್ಲಿ ದೃಢ ಶಾಂತಿ ಸ್ಥಾಪನೆ ಕುರಿತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ರಾತ್ರಿ ಭೋಜನ ಸಮಯದಲ್ಲಿ ವಿಚಾರ ವಿನಿಮಯ ನಡೆಸಿದರು.

ಈ ಭೋಜನ ಕೂಟದಲ್ಲಿ ಹಿರಿಯ ರಾಜಕೀಯ ಮತ್ತು ಅಧಿಕೃತ ಸಲಹೆಗಾರರು ಹಾಜರಿದ್ದರು.

ಹರಿಜನರ ಶೋಷಣೆ ತಪ್ಪಿಲ್ಲ,ನಿಮ್ನ ವರ್ಗದ ಉದ್ಧಾರಕ್ಕೆ ಮಾಡಿದ ವೆಚ್ಛ ವ್ಯರ್ಥ: ಸದಸ್ಯರ ಟೀಕೆ

ಬೆಂಗಳೂರು, ಜೂನ್‌ 29 – ಸ್ವಾತಂತ್ರ್ಯದ ಕಾಲು ಶತಮಾನ ಕಳೆದರೂ ಹರಿ ಜನರ ಶೋಷಣೆ ತಪ್ಪಿಲ್ಲವೆಂದೂ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದು ನಿಮ್ನ ವರ್ಗದವರ ಉದ್ಧಾರಕ್ಕೆ ಕೋಟಿಗಟ್ಟಲೆ ಹಣ ವೆಚ್ಛ ಮಾಡಿದ್ದು ವ್ಯರ್ಥವಾಗಿದೆಯೆಂದೂ ಇಂದು ವಿಧಾನಸಭೆಯಲ್ಲಿ ಸದಸ್ಯರು ಟೀಕಿಸಿದರು.

ಸಾಮಾಜಿಕ ಕಲ್ಯಾಣ ಸಚಿವ ಶ್ರೀ ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಗ್ರಾಮಾಂತರ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಮತ್ತಿತರ ಬಾಬುಗಳಿಗೆ ಸಂಬಂಧಿಸಿದ 20 ಕೋಟಿ 62 ಲಕ್ಷ ರೂ.ಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು, ಪಂಚಾಯಿತಿ ಹಾಗೂ ತಾಲೂಕು ಮಂಡಳಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು