ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷದ ಹಿಂದೆ ಈ ದಿನ : ಮಾರ್ಚ್ 01, 1973

Last Updated 28 ಫೆಬ್ರವರಿ 2023, 23:15 IST
ಅಕ್ಷರ ಗಾತ್ರ

ಪೆಟ್ರೋಲು, ಸಿಗರೇಟು, ಉಕ್ಕು, ಭೋಗವಸ್ತುಗಳು ಮತ್ತಷ್ಟು ತುಟ್ಟಿ

ನವದೆಹಲಿ, ಫೆ. 28– ಜನಸಾಮಾನ್ಯರ ದಿನಬಳಕೆ ವಸ್ತುಗಳತ್ತ ಕೈಹಾಕದೆ, ಕೇಂದ್ರ ಹಣಕಾಸು ಸಚಿವ ವೈ.ಬಿ.ಚವಾಣ್‌ ಅವರು 292 ಕೋಟಿ 60 ಲಕ್ಷ ರೂ.ಗಳಷ್ಟು ಭಾರಿಯಾದ ತೆರಿಗೆ ಏರಿಕೆಗಳನ್ನು ಸೂಚಿಸಿ, ಮಧ್ಯಮ ವರ್ಗ ಬಳಸುವ ಭೋಗವಸ್ತುಗಳ ಮೇಲೆ ದೊಡ್ಡ ಹೊರೆ ಹೇರಿದರು.

1973–74ರ ಕೇಂದ್ರ ಆಯವ್ಯಯ ಮುಂಗಡ ಪತ್ರವನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ ಚವಾಣ್‌ ಅವರು, ಸಿಗರೇಟು, ಪೆಟ್ರೋಲ್‌, ಏರ್‌ಕಂಡೀಷನರ್‌ಗಳು ಹಾಗೂ ವಿದ್ಯುಚ್ಛಕ್ತಿ ಕುಲುಮೆಯ ಉಕ್ಕು ಇವುಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸಿ, ಆಮದಾಗುವ ಎಲ್ಲ ವಿಧದ ಯಂತ್ರೋಪಕರಣಗಳ ಮೇಲೆ ಆಮದು ಸುಂಕವನ್ನು ಮೇಲಕ್ಕೇರಿಸಿದರು.

ಟ್ರಾಲಿ ಮೇಲೆ ಬಾಹುಬಲಿ

ಮಂಗಳೂರು, ಫೆ. 28– ಕಾರ್ಕಳದಿಂದ ಧರ್ಮಸ್ಥಳಕ್ಕೆ ಸಾಗಿಸಲಿರುವ 170 ಟನ್‌ ತೂಕದ ಬಾಹುಬಲಿ ವಿಗ್ರಹವನ್ನು ಸಾವಿರಾರು ಜನ ಮತ್ತು ಯಂತ್ರಗಳ ನೆರವಿನಿಂದ 9 ಗಂಟೆಗಳ ಕಾಲ ಶ್ರಮಿಸಿ, ಟ್ರಾಲಿಯ ಮೇಲೆ ಏರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ನಿನ್ನೆ ರಾತ್ರಿ ಕಾರ್ಕಳದಲ್ಲಿ ಬಾಹುಬಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಗ್ರಹದ ಶಿಲ್ಪಿ ಶ್ರೀ ಆರ್‌.ಗೋಪಾಲಶೆಣೈ ಮತ್ತು ವಿಗ್ರಹವನ್ನು ಕೆತ್ತಿಸಿದ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT