ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಆಫ್ರಿಕಾದಲ್ಲಿನ ವಸಾಹತುಗಳ ವಿಮೋಚನೆಗೆ ಭಾರತದ ನೆರವು

Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ, ಮೇ 19– ಆಫ್ರಿಕಾದಲ್ಲಿ ಇನ್ನೂ ವಸಾಹತುಶಾಹಿ ಆಡಳಿತದಲ್ಲಿರುವ ಪ್ರದೇಶಗಳ ವಿಮೋಚನೆಗೆ ನಡೆಯುವ ಸ್ವಾತಂತ್ರ್ಯ ಹೋರಾಟಕ್ಕೆ ಭಾರತವು ಪೂರ್ಣ ಬೆಂಬಲ ನೀಡುವುದೆಂದು ರಾಷ್ಟ್ರಪತಿ
ವಿ.ವಿ. ಗಿರಿ ಅವರು ಭರವಸೆ ನೀಡಿದ್ದಾರೆ. 

ಆಫ್ರಿಕಾದ ಸ್ವತಂತ್ರ ರಾಷ್ಟ್ರಗಳೊಡನೆ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಹಕಾರವನ್ನು ತೀವ್ರಗೊಳಿಸಲು ಆ ರಾಷ್ಟ್ರಗಳೊಡನೆ ಭಾರತವು ಸಂಬಂಧವನ್ನಿಟ್ಟುಕೊಳ್ಳುವುದೆಂದು ಅವರು ನುಡಿದರು. 

ರೈಲುಗಳ ಸಂಚಾರದಲ್ಲಿ ಗಣನೀಯ ಪ್ರಗತಿ: ಮತ್ತೆ 5000 ಜನ ಕೆಲಸಕ್ಕೆ

ನವದೆಹಲಿ, ಮೇ 19– ‘ಪ್ರಯಾಣಿಕರ ಹಾಗೂ ಸಾಮಗ್ರಿ ಸಾಗಣೆ ರೈಲುಗಳ ಸಂಚಾರದಲ್ಲಿ ಅದ್ಭುತ ಸುಧಾರಣೆಯಾಗಿದೆ’ ಎಂದು ರೈಲ್ವೆ ಖಾತೆಯ ವಕ್ತಾರರೊಬ್ಬರು ಇಂದು ಇಲ್ಲಿ ತಿಳಿಸಿದರು. 

ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು ಐದು ಸಾವಿರ ಮಂದಿ ರೈಲ್ವೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿರುವುದೇ ಈ ಸುಧಾರಣೆಗೆ ಕಾರಣವೆಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT