ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ (ಶನಿವಾರ–1972)

Last Updated 12 ಮೇ 2022, 19:44 IST
ಅಕ್ಷರ ಗಾತ್ರ

‘ಸ್ಟ್ಯಾಂಡರ್ಡ್‌ ಎಕರೆ’ ಬಗ್ಗೆ ಒಂಬತ್ತು ಸದಸ್ಯರ ಸಮಿತಿ ವರದಿ ಇಂದು

ನವದೆಹಲಿ, ಮೇ 12– ಭೂ ಮಿತಿಯನ್ನು ಕಡಿಮೆಗೊಳಿಸುವ ಉದ್ದೇಶಕ್ಕೆ ಸರ್ಕಾರಿ ಮತ್ತು ಖಾಸಗಿ ನೀರಾವರಿ ಜಮೀನುಗಳನ್ನು ಸಮವಾಗಿ ಪರಿಗಣಿಸಬೇಕೇ ಎಂಬ ವಿವಾದವನ್ನು ಬಗೆಹರಿಸಲು ಕಾಂಗ್ರೆಸ್‌ ನಾಯಕರ ಸಮ್ಮೇಳನ ಇಂದು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿತು.

ರಾಷ್ಟ್ರದಾದ್ಯಂತ ಭೂ ಮಿತಿ ಕಾನೂನುಗಳಲ್ಲಿ ಏಕರೂಪತೆ ತರಲು ಸಾಧ್ಯವಾಗುವಂತೆ ‘ಸ್ಟ್ಯಾಂಡರ್ಡ್‌ ಎಕರೆ’ಯ ಅರ್ಥವನ್ನು ಈ ಸಮಿತಿಯು ರಚಿಸುವುದು.

ನಾಳೆ ಮಧ್ಯಾಹ್ನದ ವೇಳೆಗೆ ಈ ಸಮಿತಿ ತನ್ನ ವರದಿ ಕೊಡುತ್ತದೆ. ಸಮಿತಿಯಲ್ಲಿರುವ ಸದಸ್ಯರೆಂದರೆ ಸಿ.ಸುಬ್ರಮಣ್ಯಂ, ಫಕ್ರುದ್ದೀನ್‌ ಅಲಿ ಅಹ್ಮದ್‌, ವಿ.ಪಿ. ನಾಯಕ್‌, ದೇವರಾಜ ಅರಸು, ಕರುಣಾಕರನ್‌, ಶ್ರೀಮತಿ ರಾಜೇಂದ್ರ ಕುಮಾರಿ ವಾಜಪೈ, ಬರ್ಕತ್‌ ಉಲ್ಲಾಖಾನ್‌ ಮತ್ತು ಮೋಹನ ಕುಮಾರ ಮಂಗಳಂ.

ಶೃಂಗಸಭೆಗೆ ತಾರೀಖು ಸೂಚಿಸಿ ಭುಟ್ಟೊಗೆ ಇಂದಿರಾ ಪತ್ರ

ನವದೆಹಲಿ, ಮೇ 12– ತಮ್ಮಿಬ್ಬರ ಭೇಟಿಗೆ ಖಚಿತ ದಿನವನ್ನು ಸೂಚಿಸಿ ಪ್ರಧಾನಿ ಇಂದಿರಾ ಗಾಂಧಿಯವರು ಪಾಕಿಸ್ತಾನದ ಅಧ್ಯಕ್ಷ ಜಡ್‌.ಎ. ಭುಟ್ಟೊ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ಇಂದಿರಾ ಗಾಂಧಿಯವರು ಸೂಚಿಸಿರುವ ತಾರೀಖನ್ನು ರಹಸ್ಯವಾಗಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT