ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಹೆಚ್ಚು ಕಚ್ಚಾ ಎಣ್ಣೆಯ ಸರಬರಾಜಿಗೆ ಇರಾನ್‌ ಸಿದ್ಧ

Published 1 ಮೇ 2024, 19:44 IST
Last Updated 1 ಮೇ 2024, 19:44 IST
ಅಕ್ಷರ ಗಾತ್ರ

ಹೆಚ್ಚು ಕಚ್ಚಾ ಎಣ್ಣೆಯ ಸರಬರಾಜಿಗೆ ಇರಾನ್‌ ಸಿದ್ಧ: ಸಾಲ ಸೌಲಭ್ಯ

ಟೆಹರಾನ್‌, ಮೇ 1– ಫೆಬ್ರುವರಿ ತಿಂಗಳಲ್ಲಿ ಭಾರತ– ಇರಾನ್‌ ಜಂಟಿ ಆಯೋಗ ನಿರ್ಧರಿಸಿದ್ದ ಕಚ್ಚಾ ಎಣ್ಣೆ ಸರಬರಾಜು ಪ್ರಮಾಣಕ್ಕಿಂತಲೂ ಹೆಚ್ಚು ಪ್ರಮಾಣದ ಕಚ್ಚಾ ಎಣ್ಣೆಯ ಸರಬರಾಜಿಗೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಪ್ರಸಕ್ತ
ಮಾತುಕತೆಗಳಲ್ಲಿ ಒಪ್ಪಿಕೊಳ್ಳಲಾಗಿದೆ.

ಇದರಿಂದ ಮದರಾಸು ತೈಲ ಶುದ್ಧೀಕರಣಾ
ಗಾರವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲ
ವಾಗುವುದು. 28 ಲಕ್ಷ ಟನ್‌ ಸಾಮರ್ಥ್ಯಕ್ಕೆ ಹೆಚ್ಚಿಸಲು ಜಂಟಿ ಆಯೋಗ ನಿರ್ಧರಿಸಿತ್ತು.

ಹತ್ತು ಲಕ್ಷ ಟನ್‌ ಕಚ್ಚಾ ಎಣ್ಣೆಗೆ ಸಾಲದ ಷರತ್ತುಗಳನ್ನು ಸಾಕಷ್ಟು ಸುಲಭಗೊಳಿಸಲು ಇರಾನ್‌ ತನ್ನಿಚ್ಛೆಯನ್ನು ವ್ಯಕ್ತಪಡಿಸಿದೆಯಲ್ಲದೆ ಹೆಚ್ಚಿನ ದಶಲಕ್ಷ ಟನ್‌ ಎಣ್ಣೆ ಸರಬರಾಜಿಗೆ ‍ಪಾವತಿ ಮುಂದೂಡಿಕೆಗೂ ಒಪ್ಪಿದೆ.

ಅರಸೀಕೆರೆ ಬಳಿ ಮರಕ್ಕೆ ಜೀಪ್‌ ಡಿಕ್ಕಿ: 9 ಜನರ ಸಾವು

ಅರಸೀಕೆರೆ, ಮೇ 1– ಅರಸೀಕೆರೆಯಿಂದ ಬೈರಾಂಬುಧಿ ಗ್ರಾಮಕ್ಕೆ ಹೋಗುತ್ತಿದ್ದ ಅರಸೀಕೆರೆಯ ಜೀಪ್‌ ಒಂದು ನಿನ್ನೆ ಮಧ್ಯರಾತ್ರಿ ಸುಮಾರಿನಲ್ಲಿ ಇಲ್ಲಿಗೆ ಮೂರು ಮೈಲಿ ದೂರದಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ಜೀಪ್‌ನಲ್ಲಿದ್ದ 12 ಮಂದಿಯ ಪೈಕಿ 9 ಮಂದಿ ಸತ್ತರೆಂದೂ ಮೂವರು ಗಾಯಗೊಂಡರೆಂದೂ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT