ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಒಂಬತ್ತು ವರ್ಷ ಕೆಡದೆ ಉಳಿದ ಸಾಧು ಶವ

Published 10 ಜುಲೈ 2024, 19:25 IST
Last Updated 10 ಜುಲೈ 2024, 19:25 IST
ಅಕ್ಷರ ಗಾತ್ರ

ಸಂಪನ್ಮೂಲ ಇಲ್ಲದಿದ್ದರೆ ಹೊಸ ನೀರಾವರಿ ಯೋಜನೆಗಳು ಬೇಡ

ನವದೆಹಲಿ, ಜುಲೈ 10– ರಾಜ್ಯಗಳ ಸಂಪನ್ಮೂಲಕ್ಕೆ ಮೀರಿದ ಹೊಸ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದು ಸೂಕ್ತವಲ್ಲವೆಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ.

ಈಗಾಗಲೇ ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮುಂದುವರಿಯುವಂಥ ಯೋಜನೆಗಳನ್ನು ಪೂರೈಸುವುದು, ನೀರಾವರಿ ಯೋಜನೆಗಳ ಅನ್ವಯಕ್ಕೆ ಸಮೀಪಿಸಿದಂತೆ ಐದನೆಯ ಯೋಜನೆಯ ಕಾರ್ಯತಂತ್ರವಾಗಿರಬೇಕೆಂಬುದು ಕೇಂದ್ರದ ಅಪೇಕ್ಷೆ.

ಒಂಬತ್ತು ವರ್ಷ ಕೆಡದೆ ಉಳಿದ ಸಾಧು ಶವ

ಲಖನೌ, ಜುಲೈ 10– ಒಂಬತ್ತು ವರ್ಷಗಳ ಹಿಂದೆ ಸಮಾಧಿ ಮಾಡಲಾಗಿದ್ದ ಸಾಧುವಿನ ಶವ ಇಂದಿಗೂ ಕೆಡದೆ ಉಳಿದಿರುವ ಪ್ರಕರಣ ವರದಿಯಾಗಿದೆ. ಉತ್ತರ ಪ್ರದೇಶ ಸೀತಾಪುರ ಜಿಲ್ಲೆಯ ಮುಷೈರಾಬಾದ್ ಗ್ರಾಮದಲ್ಲಿ ಜನ ಈಗ ಹನ್ನೊಂದು ದಿನಗಳಿಂದ ಅದರ ‘ದರ್ಶನ’ ಪ‍ಡೆಯುತ್ತಿದ್ದಾರೆ.

ಆ ಸಾಧು ಧ್ಯಾನಮಗ್ನನಾಗಿದ್ದಾಗ ಸತ್ತ. ಪೂಜನೀಯನಾಗಿದ್ದ ಆತನ ಸಮಾಧಿ ಗ್ರಾಮದ ಸನಿಹದಲ್ಲೇ ಆಗಿತ್ತು. ಆದರೆ ಹೊಸ ಸಾರ್ದಾ ಸಹಾಯಕ್ ಯೋಜನೆಯ ನೀರಿನ ಕಾಲುವೆ ಸಮಾಧಿಯ ಮೇಲೆ ಹಾದುಹೋಗುವಂತಾಯಿತು. ಕಾಲುವೆ ಅಡ್ಡಬಂದರೂ ಸಮಾಧಿಯನ್ನು ಕದಲಿಸಬಾರದೆಂದು ಭಕ್ತಾದಿಗಳು ಅಪೇಕ್ಷೆಪಟ್ಟರು. ಅದರ ‍ಪ್ರಕಾರ ಜೂನ್ 27ರಂದು ಅದರ ಮೇಲೆ ಹರಿಯುವಂತೆಯೇ ಕಾಲುವೆಯಲ್ಲಿ ನೀರು ಬಿಡಲಾಯಿತು. ಆದರೆ ಸಾಧುವಿನ ಶವ ತೇಲಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT