ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಸರ್ಕಾರಿ ಮೋಟಾರ್ ಚಾಲಕರ ಆಕ್ಷೇಪ

Published 15 ಫೆಬ್ರುವರಿ 2024, 23:04 IST
Last Updated 15 ಫೆಬ್ರುವರಿ 2024, 23:04 IST
ಅಕ್ಷರ ಗಾತ್ರ

ಪುನರ್ ವಿಂಗಡಣೆ ಶಾಸನ ವಿರುದ್ಧ ಬದಲಾವಣೆಗೆ ಸರ್ಕಾರಿ ಮೋಟಾರ್ ಚಾಲಕರ ಆಕ್ಷೇಪ

ಬೆಂಗಳೂರು, ಫೆ. 15– ರಾಜ್ಯ ಪುನರ್‌ ವಿಂಗಡಣೆಗೆ ಮುಂಚೆ ಇದ್ದ ಸರ್ಕಾರಿ ನೌಕರರ ಸ್ಥಾನಮಾನಗಳನ್ನು ಬದಲಾಯಿಸುವುದನ್ನು ರಾಜ್ಯ ಪುನರ್‌ ವಿಂಗಡಣಾ ಶಾಸನದಂತೆ ನಿಷೇಧಿಸಿದ್ದರೂ ತಮ್ಮ ದರ್ಜೆಯನ್ನು
ಬದಲಾಯಿಸಲಾಯಿತೆಂದು ಕರ್ನಾಟಕ ಸರ್ಕಾರದ ಮೋಟಾರ್ ಡ್ರೈವರ್‌ಗಳು ಆಕ್ಷೇಪಿಸಿದ್ದಾರೆ.

ರಾಜ್ಯ ಪುನರ್ ವಿಂಗಡಣೆಗೆ ಮುಂಚೆ ತಾವು ಮೂರನೇ ದರ್ಜೆ ನೌಕರರಾಗಿದ್ದು, ಈಗ ತಮ್ಮನ್ನು ನಾಲ್ಕನೇ ದರ್ಜೆ ನೌಕರರೆಂದು ಪರಿಗಣಿಸಲಾಗುತ್ತಿದೆಯೆಂದು ಸರ್ಕಾರಿ ಮೋಟಾರ್ ಡ್ರೈವರ್‌ಗಳ ಕೇಂದ್ರ ಸಂಘದ ಅಧ್ಯಕ್ಷ ವಿ.ಸಿ. ಕೃಷ್ಣಸ್ವಾಮಿ ಮತ್ತು ಕಾರ್ಯದರ್ಶಿ ವಿ.ಕೆ.ಶಂಕರ್‌ರವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಆಕ್ಷೇಪಿಸಿ, ಅನೇಕ ಸಂದರ್ಭಗಳಲ್ಲಿ ಯಾವುದೇ ಪರಿಹಾರವಿಲ್ಲದೆ ಒಂದೇ ಸಮನೆ 18 ಗಂಟೆಗಳ ಕಾಲ ಕೆಲಸ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT