ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 6–8–1972

Last Updated 5 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

10 ಎಕರೆ ಮಿತಿ: ₹1,200 ಅನ್ಯ ವರಮಾನವಿದ್ದರೆ ಭೂ ಒಡೆತನ ನಿಷೇಧ

ಬೆಂಗಳೂರು, ಆ. 5– ಗಂಡ, ಹೆಂಡತಿ ಮತ್ತು ಮೂವರು ಅಪ್ರಾಯಸ್ಥ ಮಕ್ಕಳಿರುವ ಕುಟುಂಬಕ್ಕೆ ವರ್ಷಕ್ಕೆ ಎರಡು ಭತ್ತದ ಬೆಳೆ ಬರುವ 10 ಎಕರೆ ಜಮೀನಿನ ಗರಿಷ್ಠ ಮಿತಿ ವಿಧಿಸುವ ಅವಕಾಶ ಕೇಳಿ ಕಂದಾಯ ಮಂತ್ರಿ ಹುಚ್ಚಮಾಸ್ತಿ ಗೌಡ ಅವರು ಇಂದು ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದು‍ಪಡಿ ವಿಧೇಯಕ ಮಂಡಿಸಿದರು.

ಅಧಿವೇಶನದ ಕೊನೇದಿನ ಬಂದ, ಭೂಸುಧಾರಣಾ ಶಾಸನಕ್ಕೆ ಸಮಗ್ರ ಬದಲಾವಣೆಗಳನ್ನು ಸೂಚಿಸಿರುವ ಈ ವಿಧೇಯಕವು ಬೇರೆಮೂಲಗಳಿಂದ ವರ್ಷಕ್ಕೆ ಹನ್ನೆರಡು ಸಾವಿರ ರೂಪಾಯಿಗಳಿಗಿಂತ ಕಡಿಮೆಯಿಲ್ಲದ ಆದಾಯ ಪಡೆಯುವವರು ಜಮೀನು ಹೊಂದಿರುವುದನ್ನು ನಿಷೇಧಿಸಲು ಉದ್ದೇಶಿಸಿದೆ.

ಮುಂದಿನ ವರ್ಷದೊಳಗೆ ಕನ್ನಡವು ವಿಧಾನಸೌಧದ ಎತ್ತರದ ಮೆಟ್ಟಿಲನ್ನೂ ಏರಲಿ: ಎಚ್ಚೆಸ್ಕೆ

ಮೈಸೂರು, ಆ.5– ‘ಮುಂದಿನ ವರ್ಷದ ಆಗಸ್ಟ್‌ 15ರ ಒಳಗೆ ಕನ್ನಡ ಭಾಷೆ ವಿಧಾನ
ಸೌಧದ ಎತ್ತರದ ಮೆಟ್ಟಿಲುಗಳನ್ನು ಏರುವ ಹಾಗಾಗಲಿ. ಟಿಪ್ಪಣಿಗಾರರ ತಂಪುಕೋಣೆ
ಗಳಲ್ಲೂ ಸುತ್ತಾಡಲಿ. ಬೆರಳಚ್ಚಿನ ಯಂತ್ರಗಳಿಂದ ಕನ್ನಡ ಸುಸ್ವರ ಕೇಳಿಬರಲಿ. ನ್ಯಾಯಾಲಯ, ವಿಶ್ವವಿದ್ಯಾನಿಲಯಗಳಲ್ಲೂ ಇದರದೇ ಸಂಭ್ರಮ ಮೆರೆಯಲಿ’ ಎಂದು ಪ್ರೋ ಎಚ್‌.ಎಸ್‌. ಕೃಷ್ಣಸ್ವಾಮಿ ಅಯ್ಯಂಗಾರ್‌ (ಎಚ್ಚೆಸ್ಕೆ) ಅವರು ಅಪೇಕ್ಷಿಸಿದರು.

ಕೊಳ್ಳೆಗಾಲದ ಶ್ರೀಮತಿ ವಸಂತ ಕುಮಾರಿ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿತವಾಗಿರುವ ‘ನಿಜಗುಣ ಮಂಟಪ’ದಲ್ಲಿ ಪ್ರಾರಂಭವಾದ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT