ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ಬಸಪ್ಪ ದಾನಪ್ಪ ಜತ್ತಿ ಹೊಸ ಉಪರಾಷ್ಟ್ರಪತಿ

Published 27 ಆಗಸ್ಟ್ 2024, 22:30 IST
Last Updated 27 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ನವದೆಹಲಿ, ಆಗಸ್ಟ್ 27– ಕಾಂಗ್ರೆಸ್ ಅಭ್ಯರ್ಥಿಯಾದ ಬಸಪ್ಪ ದಾನಪ್ಪ ಜತ್ತಿ ಅವರು ಇಂದು ಭಾರತ ಗಣರಾಜ್ಯದ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ನೇರ ಸ್ಪರ್ಧೆಯಲ್ಲಿ ಜತ್ತಿಯವರು 521 ಮತಗಳನ್ನೂ, ಅವರ ಪ್ರತಿಸ್ಪರ್ಧಿಯಾದ ವಿರೋಧ ಪಕ್ಷಗಳ ಅಭ್ಯರ್ಥಿ ಎನ್.ಇ. ಹೋರೋ ಅವರು 141 ಮತಗಳನ್ನೂ ಪಡೆದರು.

ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದು 10 ಮತಗಳು ಕುಲಗೆಟ್ಟಿದ್ದವು. 40 ಮಂದಿ ಸದಸ್ಯರು ಮತ ನೀಡಲೇ ಇಲ್ಲ ಎಂದು ಚುನಾವಣಾ ಅಧಿಕಾರಿ ಎಸ್.ಎಲ್. ಷೇಕ್‌ದಾರ್ ತಿಳಿಸಿದ್ದಾರೆ.

ಕಾಳಿ ವಿದ್ಯುತ್ ಯೋಜನೆ ನಿಲ್ಲದು: ಸಚಿವರ ಭರವಸೆ

ಬೆಂಗಳೂರು, ಆಗಸ್ಟ್ 27– ‘ಹಣದ ಕೊರತೆಯಿಂದಾಗಿ ಕಾಳಿ ಜಲ ವಿದ್ಯುತ್ ಯೋಜನೆಯ ಕಾರ್ಯ ನಿಂತಿಲ್ಲ; ನಿಲ್ಲುವುದೂ ಇಲ್ಲ. ಈ ಬಗ್ಗೆ ಯಾವ ಆತಂಕವೂ ಬೇಡ’ ಎಂದು ಲೋಕೋಪಯೋಗಿ ಇಲಾಖಾ ಮಂತ್ರಿ ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಗೆ ಸ್ಪಷ್ಟ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT