ಕಾಳಿನದಿ ಯೋಜನೆಗೆ ಕೂಡಲೇ ಒಪ್ಪಿಗೆಗೆ ಕೇಂದ್ರಕ್ಕೆ ಒತ್ತಾಯ
ಜೋಗ್, ಜೂನ್ 2– ರಾಜ್ಯದಲ್ಲಿ ಭಾರಿ ಉದ್ದಿಮೆಗಳು ಮತ್ತು ಕೃಷಿರಂಗದಿಂದ ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ವಿಳಂಬವಿಲ್ಲದೆ ಕಾಳಿನದಿ ಯೋಜನೆಗೆ ಒಪ್ಪಿಗೆ ನೀಡಬೇಕೆಂದು ರಾಜ್ಯಪಾಲ ಶ್ರೀ ಧರ್ಮವೀರ ಮತ್ತು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಒತ್ತಾಯಪಡಿಸಿದರು.

ಶರಾವತಿ ವಿದ್ಯುತ್ ಕೇಂದ್ರದಲ್ಲಿ ತಲಾ 89.1 ಕಿಲೊವಾಟ್ ಶಕ್ತಿಯನ್ನು ಉತ್ಪಾದಿಸುವ ಐದು, ಆರು ಮತ್ತು ಏಳನೇ ಘಟಕಗಳನ್ನು ರಾಜ್ಯಪಾಲರು ಉದ್ಘಾಟಿಸಿದರು. ಶರಾವತಿಯನ್ನು ನಮ್ಮ ಆರ್ಥಿಕ ಭವಿಷ್ಯದ ಆಶಾ ಸಂಕೇತ ಎಂದು ಅವರು ವರ್ಣಿಸಿದರು.

ಕೋಮುಶಕ್ತಿಗಳ ದಮನಕ್ಕೆ ಉಗ್ರ ಕ್ರಮ ಕೈಗೊಳ್ಳಲು ಕರೆ
ನವದೆಹಲಿ, ಜೂನ್ 2– ಕೋಮು ಸಂಘಗಳನ್ನು ನಿಷೇಧಿಸುವ ಸಾಧ್ಯತೆ ಬಗ್ಗೆ ಕೇಂದ್ರದ ಪರಿಶೀಲನೆ ಮತ್ತು ಫಲಿತಾಂಶಕ್ಕಾಗಿ ಕಾಯದೇ ರಾಜ್ಯ ಸರ್ಕಾರಗಳು ಕೋಮು ಶಕ್ತಿಗಳ ದಮನಕ್ಕೆ ಸೂಕ್ತ ಹಾಗೂ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಇಂದಿರಾ ಗಾಂಧಿಯವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅವರು ಈಚೆಗೆ ದೆಹಲಿಯಲ್ಲಿ ಮುಖ್ಯಮಂತ್ರಿಗಳ ಸಭೆಯಲ್ಲಿ ನಡೆದ ಮಾತುಕತೆಗಳನ್ನು ಪ್ರಸ್ತಾಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.