ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

ನವದೆಹಲಿ, ಮಾರ್ಚ್ 28– ಮಣಿಪುರದ ಆಡಳಿತವನ್ನು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ವಹಿಸಿಕೊಂಡರು.

ಮಣಿಪುರದ ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರ ಶಿಫಾರಸಿನಂತೆ ವಿಧಾನ ಸಭೆಯನ್ನು ಸಸ್ಪೆನ್ಷನ್‌ನಲ್ಲಿಡುವುದರ ಬದಲು ಅದನ್ನು ರಾಷ್ಟ್ರಪತಿ ಅವರು ವಿಸರ್ಜಿಸಿದರು.

ರಾಷ್ಟ್ರಪತಿ ಆಡಳಿತ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟ ಈ ಬೆಳಿಗ್ಗೆ ನಿರ್ಧರಿಸಿದ ತತ್‌ಕ್ಷಣವೇ ರಾಷ್ಟ್ರಪತಿ ಅವರು ಆಡಳಿತ ವಹಿಸಿಕೊಳ್ಳುವ ಬಗ್ಗೆ ಸಂವಿಧಾನದ 356ನೇ ವಿಧಿ ಮೇರೆಗೆ ಘೋಷಣೆ ಹೊರಡಿಸಿದರು.

ಡಿ.ವಿ.ಜಿ.ಗೆ ಲಘು ಹೃದಯಾಘಾತ

ಬೆಂಗಳೂರು, ಮಾರ್ಚ್ 28– ಸುಪ್ರಸಿದ್ಧ ಸಾಹಿತಿ ಡಾ|| ಡಿ.ವಿ.ಗುಂಡಪ್ಪ ಅವರು ಕಳೆದ ಎರಡು ದಿನಗಳ ಹಿಂದೆ ಮತ್ತೆ ಲ್ಯಾಂಗ್‌ಪೋರ್ಡ್ ರಸ್ತೆಯಲ್ಲಿರುವ ರಿಪಬ್ಲಿಕ್ ನರ್ಸಿಂಗ್ ಹೋಮನ್ನು ಸೇರಿದ್ದಾರೆ.

ಲಘು ಹೃದಯಾಘಾತ ಕಾರಣ ಚಿಕಿತ್ಸೆ ಪಡೆಯುತ್ತಿರುವ ಶ್ರೀಯುತರ ಸ್ಥಿತಿ ಈಗ ಉತ್ತಮಗೊಂಡಿದೆ.

ಡಾ|| ಗುಂಡಪ್ಪ ಅವರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ತಮ್ಮ ವೃದ್ಧಾಪ್ಯದಲ್ಲಿ ತಮಗೆ ವಾಹನಗಳ ಹಾರನ್‌ಗಳಿಂದ ತೊಂದರೆಯಾಗಿದೆಯೆಂದು ತಿಸಿದ್ದಾರೆಂದೂ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.