l→ಪ್ರಧಾನಿ ಹತ್ಯೆ ಯತ್ನದಲ್ಲಿ
ಸಿ.ಐ.ಎ. ಕೈವಾಡ ಕುರಿತು
ಸರ್ಕಾರಿ ಹೇಳಿಕೆಗೆ ಆಗ್ರಹ

ನವದೆಹಲಿ, ಡಿಸೆಂಬರ್ 4– ಕಳೆದೆರಡು ವರ್ಷಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ನಡೆದ ಮೂರು–ನಾಲ್ಕು ಯತ್ನಗಳಲ್ಲಿ ಅಮೆರಿಕದ ಕೇಂದ್ರ ಗೂಢಚರ್ಯೆ ಸಂಸ್ಥೆಯ (ಸಿ.ಐ.ಎ) ಕೈವಾಡವಿತ್ತೆಂಬ ಕುವೈತ್ ವರದಿಗಳ ಬಗೆಗೆ ರಾಜ್ಯಸಭೆ ಸದಸ್ಯರು ಇಂದು ತೀವ್ರ ಆತಂಕ ವ್ಯಕ್ತಪಡಿಸಿದರು.

‘ವಿಶ್ವ ತತ್ತರಿಸುವಂತಹ’ ಆ ವರದಿ ಕುರಿತು ಹೇಳಿಕೆ ನೀಡಬೇಕೆಂದು ಎಲ್ಲ ವಿಭಾಗದ ಸದಸ್ಯರೂ ಸರ್ಕಾರವನ್ನು ಒತ್ತಾಯ
ಪಡಿಸಿದರು. ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ
ಓಂ ಮೆಹ್ತಾ ಅವರು, ವರದಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕಾಗಿ ಸದಸ್ಯರನ್ನು ವಂದಿಸಿದರು.

l 5ನೇ ಯೋಜನೆ: ನೀರಾವರಿಗೆ ಆದ್ಯತೆ

ಬೆಂಗಳೂರು, ಡಿಸೆಂಬರ್ 4– ರಾಜ್ಯದ ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಎಂ.ಎಸ್. ಕೃಷ್ಣನ್ (ಸಿ.ಪಿ.ಐ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ವಿವರವಾದ ಐದನೇ ಪಂಚವಾರ್ಷಿಕ ಯೋಜನೆಯನ್ನು ತಯಾರಿಸುವುದಕ್ಕೆ ಆಧಾರರೂಪವಾಗಿ ಮಾರ್ಗದರ್ಶಕ ಯೋಜನೆಯೊಂದನ್ನು ತಯಾರಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.