‘ಕ್ಯಾಬರೆ’ಗಳ ಮೇಲೆ ಸೆನ್ಸಾರ್ ಕೆಂಗಣ್ಣು

ಮದ್ರಾಸ್, ಮೇ 3– ‘ಚಲನಚಿತ್ರಗಳಲ್ಲಿ ಕತೆಗೆ ಸಂಬಂಧಿಸದೇ ಇರುವ ಕ್ಯಾಬರೆ ನೃತ್ಯಗಳನ್ನು ಸೇರಿಸುವ ಪ್ರವೃತ್ತಿ ನಿರ್ಮಾಪಕರಲ್ಲಿ ಬೆಳೆದು ಬಂದಿದೆ. ಕೆಲವು ಸಂದರ್ಭಗಳಲ್ಲಂತೂ ಈ ನೃತ್ಯಗಳಲ್ಲಿನ ಚಲನವಲನಗಳು, ಹೆಣ್ಣಿನ ಅಂಗಾಂಗಗಳನ್ನು ಪ್ರಚೋದಕವಾದ ರೀತಿಯಲ್ಲಿ ಲೈಂಗಿಕಾಕರ್ಷಣೆ ಇರುವಂತೆ ತೋರಿಸುವಂತಿರುತ್ತವೆ’.

–ಇದು ಕೇಂದ್ರ ಸೆನ್ಸಾರ್ ಮಂಡಳಿ ವ್ಯಕ್ತಪಡಿಸಿರುವ ಅಭಿಪ್ರಾಯ.

‘ಚಿತ್ರಗಳಲ್ಲಿ ಕ್ಯಾಬರೆ ನೃತ್ಯಗಳನ್ನು ಸೇರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ನಿರ್ಮಾಪಕರಿಗೆ ಸೂಚಿಸಿ’ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷರು ದಕ್ಷಿಣ ಭಾರತ ಫಿಲಂ ಚೇಂಬರ್ಗೆ ಬರೆದಿರುವ ಪತ್ರವೊಂದರಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗದವರಿಗೆ ಸ್ಥಾನ ಮೀಸಲಿಡುವ ರಾಜ್ಯದ ವೈದ್ಯಕೀಯ ಕಾಲೇಜುಗಳ ನಿಯಮ ಸಿಂಧು

ನವದೆಹಲಿ, ಮೇ 3– ಹಿಂದುಳಿದ ವರ್ಗ ದವರು ಮತ್ತು ರಾಜಕೀಯ ಸಂತ್ರಸ್ತರ ಮಕ್ಕಳಿಗೆ ಸ್ಥಾನಗಳನ್ನು ಮೀಸಲಿಡುವ ಮೈಸೂರು ವೈದ್ಯಕೀಯ ಕಾಲೇಜುಗಳ (ಪ್ರವೇಶಕ್ಕಾಗಿ ಆಯ್ಕೆ) 1970ರ ನಿಯಮ ಗಳು ಕ್ರಮಬದ್ಧವೆಂದು ಸುಪ್ರೀಂ ಕೋರ್ಟ್ ಇಂದುಎತ್ತಿ ಹಿಡಿಯಿತು.

ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳಿಂದೊಡಗೂಡಿದ ಪೀಠದ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಬಹುಮತದ ಈ ತೀರ್ಪು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.