ಭಾನುವಾರ, ನವೆಂಬರ್ 29, 2020
19 °C

50 ವರ್ಷಗಳ ಹಿಂದೆ: ಗುರುವಾರ, 29–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚಾಯಿತಿಗೆ ಜಲವಿವಾದ ಒಪ್ಪಿಸಿದರೆ ಅನಿಷ್ಟ ಪರಿಣಾಮ: ಕೇಂದ್ರಕ್ಕೆ ಎಚ್ಚರಿಕೆ

ಬೆಂಗಳೂರು, ಅ. 28– ಅನೇಕ ವರ್ಷಗಳಿಂದ ತನ್ನ ಮುಂದಿರುವ ಕಾವೇರಿ ಯೋಜನೆಗಳಿಗೆ ಮಂಜೂರಾತಿ ನೀಡದೆ, ಕಾವೇರಿ ನೀರು ವಿವಾದವನ್ನು ಕೇಂದ್ರ ಸರ್ಕಾರ ಪಂಚಾಯಿತಿಗೆ ಒಪ್ಪಿಸಿದಲ್ಲಿ, ‘ಅನಿಷ್ಟ ಪರಿಣಾಮಗಳಿಗೆ’ ಅವಕಾಶವಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಇಲ್ಲಿ ಇಂದು ಎಚ್ಚರಿಕೆ ನೀಡಿದರು.

‘ಕೇಂದ್ರ ಸರ್ಕಾರ ತನ್ನ ತೀರ್ಮಾನವನ್ನು ಪ್ರಕಟಿಸಲಿ. ನಾನು ನನ್ನ ಕಾರ್ಯಕ್ರಮವನ್ನು ಪ್ರಕಟಿಸುತ್ತೇನೆ’ ಎಂದು ಘೋಷಿಸಿದರು.

17 ಮಂದಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರು, ಅ. 28– ಈ ವರ್ಷದ ರಾಜ್ಯೋತ್ಸವದಂದು ಹದಿನೇಳು ಮಂದಿಗೆ ರಾಜ್ಯ ಪ್ರಶಸ್ತಿ ನೀಡಲಾಗುವುದು.

ಪ್ರಶಸ್ತಿಗೆ ಸಮಾಜ ಸೇವಕರು, ಸಾಹಿತಿಗಳು, ಕಲಾವಿದರು, ಪ್ರಮುಖ ಸರ್ಕಾರಿ ಅಧಿಕಾರಿಗಳನ್ನು ಆರಿಸಲಾಗಿದೆ. ಸರ್ವಶ್ರೀ ಪಿ.ಐ. ಜೋಸೆಫ್‌, ಎಚ್‌.ವಿ. ನಾರಾಯಣರಾವ್‌, ಶ್ರೀಮತಿ ಗಂಗೂಬಾಯಿ ಹಾನಗಲ್‌, ಜಿ.ಪಿ ರಾಜರತ್ನಂ, ಬಿ.ಆರ್‌.ಪಂತುಲು, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಪಂಡಿತ ಪುಟ್ಟರಾಜ ಗವಾಯಿ ಮೊದಲಾದವರು ಇವರಲ್ಲಿ ಸೇರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು