ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶುಕ್ರವಾರ 6-11-1970

Last Updated 5 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಸಾಲದ ಸಮೀಕ್ಷೆಗಾಗಿ ಪ್ರತ್ಯೇಕ ವಿಭಾಗ ತೆರೆಯಲು ಮುಖ್ಯಮಂತ್ರಿ ಸಲಹೆ

ಮಂಗಳೂರು, ನ.5 – ‘ಇಂದು ಪಟ್ಟಣಗಳಲ್ಲಿ ನಿರುದ್ಯೋಗ ಸಮಸ್ಯೆ ನಮ್ಮನ್ನು ಕಾಡುತ್ತಿದ್ದರೆ, ಹಳ್ಳಿಗಳಲ್ಲಿ ವರ್ಷದಲ್ಲಿ 3–4 ತಿಂಗಳಿಗಿಂತ ಹೆಚ್ಚು ದುಡಿಮೆಗೆ ಅವಕಾಶ ಇಲ್ಲ. ನಮಗೆ ಸಮಯದ ಅರಿವು ಅಗತ್ಯ. ಮಾನವ ಶಕ್ತಿಯ ನಷ್ಟ ಆಗದಂತೆ ಮುಂದಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಇಲ್ಲಿ ಹೇಳಿದರು.

ಮುಖ್ಯಮಂತ್ರಿಗಳು ಇಂದು ಇಲ್ಲಿ ಮೈಸೂರು ವಿಭಾಗದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳ ಸಮ್ಮೇಳನವನ್ನು ಉದ್ಘಾಟಿಸಿದರು.

‘ವ್ಯವಸಾಯದಲ್ಲಿ ಕ್ರಾಂತಿ ಆದರೆ ಮಾತ್ರ ನಮ್ಮ ದೇಶದದ ಎಲ್ಲ ಸಮಸ್ಯೆಗಳೂ ನೀಗುತ್ತವೆ. ದುಡಿಯಬೇಕು ಎನ್ನುವವರಿಗೆ ಸಾಕಷ್ಟು ಅವಕಾಶ ಸಿಗುತ್ತದೆ’ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು.

ಪಿಟೀಲು ವಿದ್ವಾಂಸ ರಾಜಮಾಣಿಕ್ಯಂ ಪಿಳ್ಳೆ ನಿಧನ

ಮದ್ರಾಸ್‌, ನ. 5– ಸುಪ್ರಸಿದ್ಧ ಪಿಟೀಲು ವಿದ್ವಾಂಸ ಸಂಗೀತ ಕಲಾನಿಧಿ ಕುಂಬಕೋಣಂ ರಾಜಮಾಣಿಕ್ಯಂ ಪಿಳ್ಳೆ ಅವರು ಇಂದು ಬೆಳಿಗ್ಗೆ ಕುಂಬಕೋಣಂನಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು.

ಶಂಭು ಮಹಾರಾಜ್‌ ಅಂತ್ಯಕ್ರಿಯೆ

ನವದೆಹಲಿ, ನ.5– ಖ್ಯಾತ ಕಥಕ್‌ಪಟು ಶಂಭು ಮಹಾರಾಜ್‌ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಇಲ್ಲಿ ಯಮುನೆಯ ದಡದ ಮೇಲೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT