ಮಂಜೂರಾದ ಲೈಸೆನ್ಸ್ ಬಳಕೆ ಆಗದಿರುವುದೇ ಕೈಗಾರಿಕಾ ಜಡತೆಗೆ ಕಾರಣ
ನವದೆಹಲಿ, ನ. 23– ಈಗಾಗಲೇ ಮಂಜೂರು ಮಾಡಿರುವ ಕೈಗಾರಿಕಾ ಲೈಸೆನ್ಸ್‌ಗಳನ್ನು ಬಳಸಿಕೊಳ್ಳದೆ ಹೋಗಿರುವುದೇ ಕೈಗಾರಿಕಾ ಉತ್ಪಾದನೆಯ ಗತಿ ಈಗ ಮಂದ ಪ್ರವೃತ್ತಿ ತೋರಿಸುವುದಕ್ಕೆ ಕಾರಣ ಎಂದು ಕೈಗಾರಿಕಾಭಿವೃದ್ಧಿ ಸಚಿವ ದಿನೇಶ್ ಸಿಂಗ್ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.

ಸ್ವದೇಶದಲ್ಲಿ ತಯಾರಾದ ಎಲ್ಲ ಸಲಕರಣೆಗಳು ಹಾಗೂ ವಸ್ತುಗಳು ಶ್ರೇಷ್ಠ ಗುಣಮಟ್ಟ ಪಡೆದಿವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ನಾವು ಉತ್ಪಾದನೆಗೆ ಪ್ರೋತ್ಸಾಹ ಕೊಡಬೇಕು. ಆಮದಾದ ವಸ್ತುಗಳ ಗುಣಮಟ್ಟವನ್ನು ಸ್ವದೇಶಿ ವಸ್ತುಗಳು ಪಡೆಯಬೇಕಾದರೆ ಕೊಂಚ ಕಾಲ ಬೇಕಾಗಬಹುದು ಎಂದು ಅವರು ಮೊಹ್ತಾ ಅವರ ಪ್ರಶ್ನೆಗೆ ಉತ್ತರವಿತ್ತರು.

‘ಪರಿಶಿಷ್ಟ ವರ್ಗಗಳ ಪಟ್ಟಿ ತಯಾರಿಕೆಯಲ್ಲಿ ಧರ್ಮದ ಪ್ರಸ್ತಾಪ ಬೇಡ’
ನವದೆಹಲಿ, ನ. 23– ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ವರ್ಗಗಳು ಮತ್ತು ಗುಡ್ಡಗಾಡು ಜನರ ಮರುಪಟ್ಟಿ ಮಾಡುವಾಗ ಧರ್ಮದ ವಿಷಯವನ್ನು ಪ್ರಸ್ತಾಪಿಸುವುದರಿಂದ ರಾಷ್ಟ್ರದ ಭದ್ರತೆ ಹಾಗೂ ಏಕತೆಗೆ ಅಪಾಯ ಉಂಟಾಗುತ್ತದೆಂದು ಸರ್ಕಾರದ ಸಚಿವರೊಬ್ಬರು ಇಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.