ಭಾನುವಾರ, ಮಾರ್ಚ್ 7, 2021
32 °C

50 ವರ್ಷಗಳ ಹಿಂದೆ: ಮಂಗಳವಾರ, 19–1–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡೂವರೆ ಲಕ್ಷ ಮಂದಿ ಸರ್ಕಾರಿ ನೌಕರರಿಗೆ ಭತ್ಯೆಗಳ ಏರಿಕೆ ಮತ್ತಿತರ ಸೌಲಭ್ಯ

ಬೆಂಗಳೂರು, ಜ. 18– ಇಂದು ಮಂತ್ರಿಮಂಡಲ ಕೈಗೊಂಡ ಕೆಲವು ತೀರ್ಮಾನಗಳ ಪರಿಣಾಮವಾಗಿ ರಾಜ್ಯ ಸರ್ಕಾರದ ಸುಮಾರು ಎರಡೂವರೆ ಲಕ್ಷ ಮಂದಿ ನೌಕರರು ಹೆಚ್ಚಿನ ಮನೆ ಬಾಡಿಗೆ ಭತ್ಯೆ, ಹೆಚ್ಚಿನ ದಿನಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು ಪಡೆಯಲಿದ್ದಾರೆ.‌

ಕಡಿಮೆ ಸಮಯದಲ್ಲಿ ಹೆಚ್ಚಿನ ಬಡ್ತಿಗಳೂ ಸಿಕ್ಕುವಂತೆ ವೇತನ ಸ್ಕೇಲುಗಳನ್ನು ಶಾಸ್ತ್ರೀಯಗೊಳಿಸಿರುವುದು, ‘ವೇತನ ಗೊತ್ತು ಮಾಡಿರುವುದು ಹೊರತು ಉಳಿದೆಲ್ಲ ಉದ್ದೇಶಗಳಿಗಾಗಿ’ತುಟ್ಟಿ ಭತ್ಯದ ಒಂದು ಭಾಗವನ್ನು ‘ಅಡಿಷನಲ್‌ ಮೂಲವೇತನ’ ಎಂದು ಲೆಕ್ಕ ಮಾಡುವುದು, ಇವು ನೌಕರರುಇಂದು ಪಡೆದ ಮತ್ತೆರಡು ಸೌಲಭ್ಯಗಳು. ಇದರ ಪರಿಣಾಮವಾಗಿ ಕನಿಷ್ಠ ಮೂಲವೇತನ 65 ರೂ.ನಿಂದ ನೂರು ರೂ. ಮೀರುತ್ತದೆ.

ಕಾಂಗ್ರೆಸ್‌ನ ಜೆ.ಲಿಂಗಯ್ಯ ಮೇಯರ್‌, ಚಂದ್ರಶೇಖರನ್‌ ಉಪಮೇಯರ್‌

ಬೆಂಗಳೂರು, ಜ. 18– ಸುಮಾರು 40 ವರ್ಷಗಳ ಹಿಂದೆ ನಾಲ್ಕಾಣೆ ದಿನಗೂಲಿಯ ಮೇಲೆ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕಾರ್ಮಿಕ ಚಳವಳಿಯಲ್ಲಿ ನಿರಂತರವಾಗಿ ಭಾಗವಹಿಸಿರುವ ಕಾಂಗ್ರೆಸ್‌ನ ಶ್ರೀ ಜೆ. ಲಿಂಗಯ್ಯ ಅವರು ಇಂದು ನಗರದ ‘ಪ್ರಥಮ ಪ್ರಜೆ’ಯಾಗಿ ಹಾಗೂ ವಿ.ಎಂ. ಚಂದ್ರಶೇಖರನ್‌ ಅವರು ಉಪಮೇಯರ್‌ ಆಗಿ ಚುನಾಯಿತರಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು