ಬುಧವಾರ, ಮೇ 12, 2021
20 °C

50 ವರ್ಷಗಳ ಹಿಂದೆ: ಮಂಗಳವಾರ 04.5.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕ್ಯಾಬರೆ’ಗಳ ಮೇಲೆ ಸೆನ್ಸಾರ್ ಕೆಂಗಣ್ಣು

ಮದ್ರಾಸ್, ಮೇ 3– ‘ಚಲನಚಿತ್ರಗಳಲ್ಲಿ ಕತೆಗೆ ಸಂಬಂಧಿಸದೇ ಇರುವ ಕ್ಯಾಬರೆ ನೃತ್ಯಗಳನ್ನು ಸೇರಿಸುವ ಪ್ರವೃತ್ತಿ ನಿರ್ಮಾಪಕರಲ್ಲಿ ಬೆಳೆದು ಬಂದಿದೆ. ಕೆಲವು ಸಂದರ್ಭಗಳಲ್ಲಂತೂ ಈ ನೃತ್ಯಗಳಲ್ಲಿನ ಚಲನವಲನಗಳು, ಹೆಣ್ಣಿನ ಅಂಗಾಂಗಗಳನ್ನು ಪ್ರಚೋದಕವಾದ ರೀತಿಯಲ್ಲಿ ಲೈಂಗಿಕಾಕರ್ಷಣೆ ಇರುವಂತೆ ತೋರಿಸುವಂತಿರುತ್ತವೆ’.

 –ಇದು ಕೇಂದ್ರ ಸೆನ್ಸಾರ್ ಮಂಡಳಿ ವ್ಯಕ್ತಪಡಿಸಿರುವ ಅಭಿಪ್ರಾಯ.

‘ಚಿತ್ರಗಳಲ್ಲಿ ಕ್ಯಾಬರೆ ನೃತ್ಯಗಳನ್ನು ಸೇರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ನಿರ್ಮಾಪಕರಿಗೆ ಸೂಚಿಸಿ’ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷರು ದಕ್ಷಿಣ ಭಾರತ ಫಿಲಂ ಚೇಂಬರ್‌ಗೆ ಬರೆದಿರುವ ಪತ್ರವೊಂದರಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗದವರಿಗೆ ಸ್ಥಾನ ಮೀಸಲಿಡುವ ರಾಜ್ಯದ ವೈದ್ಯಕೀಯ ಕಾಲೇಜುಗಳ ನಿಯಮ ಸಿಂಧು

ನವದೆಹಲಿ, ಮೇ 3– ಹಿಂದುಳಿದ ವರ್ಗ ದವರು ಮತ್ತು ರಾಜಕೀಯ ಸಂತ್ರಸ್ತರ ಮಕ್ಕಳಿಗೆ ಸ್ಥಾನಗಳನ್ನು ಮೀಸಲಿಡುವ ಮೈಸೂರು ವೈದ್ಯಕೀಯ ಕಾಲೇಜುಗಳ (ಪ್ರವೇಶಕ್ಕಾಗಿ ಆಯ್ಕೆ) 1970ರ ನಿಯಮ ಗಳು ಕ್ರಮಬದ್ಧವೆಂದು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿಯಿತು.

ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿಂದೊಡಗೂಡಿದ ಪೀಠದ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಬಹುಮತದ ಈ ತೀರ್ಪು ನೀಡಿದರು.‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು