ಲೋಕಸಭೆಯ ಎಲ್ಲಾ ಪಕ್ಷಗಳಿಂದಲೂ ಮುಕ್ತಕಂಠದ ಸ್ವಾಗತ

ನವದೆಹಲಿ, ಆ 10– ರಷ್ಯದೊಡನೆ ಭಾರತ ಮಾಡಿಕೊಂಡಿರುವ 20 ವರ್ಷಗಳ ಅವಧಿಯ ಶಾಂತಿ, ಸ್ನೇಹ ಸಹಾಕರ ಒಪ್ಪಂದವನ್ನು ಇಂದು ಲೋಕಸಭೆಯಲ್ಲಿ ಸಾಮಾನ್ಯವಾಗಿ ಎಲ್ಲ ಪಕ್ಷಗಳೂ ಮುಕ್ತ ಕಂಠದಿಂದ ಸ್ವಾಗತಿಸಿದವು.

ಕಷ್ಟ ಸಮಯಗಳಲ್ಲಿ, ಭಾರತಕ್ಕೊಂದು ನಂಬಲರ್ಹ ಮಿತ್ರ ರಾಷ್ಟ್ರ ಸಿಕ್ಕಿರುವುದೆಂದು ಜನ ಸಂಘದ ನಾಯಕ ಎ.ಬಿ. ವಾಜಪೇಯಿ ಹೇಳಿದರು. ಸ್ವತಂತ್ರ ಪಕ್ಷದ ಪಿಲೂಮೋದಿ ಅವರು ಈ ಒಪ್ಪಂದದಿಂದ ರಷ್ಯಕ್ಕೆ ಅನುಕೂಲವೆಂದು ಜಾಗರೂಕ ವಿಶ್ಲೇಷಣೆಯಿಂದ ವ್ಯಕ್ತಪಡುವುದೆಂದರು.

ಸ್ವತಂತ್ರ, ಜನಸಂಘಗಳ ಟೀಕೆ ಮಧ್ಯೆ ರಾಜ್ಯಸಭೆಯಲ್ಲಿ ಸಂವಿಧಾನ ಮಸೂದೆ ಮಂಡನೆ

ನವದೆಹಲಿ, ಆ 10– ಆಡಳಿತ ಕಾಂಗ್ರೆಸ್ ಸದಸ್ಯರ ಹರ್ಷೋದ್ಘಾರ ಹಾಗೂ ಜನಸಂಘ ಮತ್ತು ಸ್ವತಂತ್ರ ಪಕ್ಷಗಳ ಸದಸ್ಯರ ಆಕ್ಷೇಪಣೆಗಳ ಮಧ್ಯೆ ಸಂವಿಧಾನ ತಿದ್ದುಪಡಿ ವಿಧೇಯಕದ ಚರ್ಚೆಯನ್ನು ಇಂದು ರಾಜ್ಯಸಭೆ ಆರಂಭಿಸಿತು.

ಚರ್ಚೆಗಾಗಿ ವಿಧೇಯಕ ಮಂಡಿಸಿದ ಕೇಂದ್ರ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರು, ‘ಪ್ರಗತಿಯ ಹಾದಿಯಲ್ಲಿ ಅಡ್ಡಬಂದಿರುವ ಕೆಲವು ನ್ಯಾಯಾಂಗ ನಿರ್ಧಾರಗಳ ಅಡಚಣೆಗಳನ್ನು ನಿವಾರಿಸಲು ಹಾಗೂ ಸಂವಿಧಾನದ ಯಾವ ಭಾಗವನ್ನೇ ಆಗಲಿ ತಿದ್ದುಲು ಸಂಸತ್ತಿಗೆ ಇರುವ ಪರಮಾಧಿಕಾರವನ್ನು ಮತ್ತೆ ಸ್ಥಾಪಿಸುವುದೇ ವಿಧೇಯಕದ ಉದ್ದೇಶವೆಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.