ಶನಿವಾರ, ಜನವರಿ 28, 2023
15 °C

50 ವರ್ಷಗಳ ಹಿಂದೆ ಈ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

l→ಪ್ರಧಾನಿ ಹತ್ಯೆ ಯತ್ನದಲ್ಲಿ
ಸಿ.ಐ.ಎ. ಕೈವಾಡ ಕುರಿತು
ಸರ್ಕಾರಿ ಹೇಳಿಕೆಗೆ ಆಗ್ರಹ

ನವದೆಹಲಿ, ಡಿಸೆಂಬರ್‌ 4– ಕಳೆದೆರಡು ವರ್ಷಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ನಡೆದ ಮೂರು–ನಾಲ್ಕು ಯತ್ನಗಳಲ್ಲಿ ಅಮೆರಿಕದ ಕೇಂದ್ರ ಗೂಢಚರ್ಯೆ ಸಂಸ್ಥೆಯ (ಸಿ.ಐ.ಎ) ಕೈವಾಡವಿತ್ತೆಂಬ ಕುವೈತ್‌ ವರದಿಗಳ ಬಗೆಗೆ ರಾಜ್ಯಸಭೆ ಸದಸ್ಯರು ಇಂದು ತೀವ್ರ ಆತಂಕ ವ್ಯಕ್ತಪಡಿಸಿದರು.

‘ವಿಶ್ವ ತತ್ತರಿಸುವಂತಹ’ ಆ ವರದಿ ಕುರಿತು ಹೇಳಿಕೆ ನೀಡಬೇಕೆಂದು ಎಲ್ಲ ವಿಭಾಗದ ಸದಸ್ಯರೂ ಸರ್ಕಾರವನ್ನು ಒತ್ತಾಯ
ಪಡಿಸಿದರು. ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ
ಓಂ ಮೆಹ್ತಾ ಅವರು, ವರದಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕಾಗಿ ಸದಸ್ಯರನ್ನು ವಂದಿಸಿದರು.

l 5ನೇ ಯೋಜನೆ: ನೀರಾವರಿಗೆ ಆದ್ಯತೆ

ಬೆಂಗಳೂರು, ಡಿಸೆಂಬರ್‌ 4– ರಾಜ್ಯದ ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಎಂ.ಎಸ್‌. ಕೃ‌ಷ್ಣನ್‌ (ಸಿ.‍ಪಿ.ಐ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ವಿವರವಾದ ಐದನೇ ಪಂಚವಾರ್ಷಿಕ ಯೋಜನೆಯನ್ನು ತಯಾರಿಸುವುದಕ್ಕೆ ಆಧಾರರೂಪವಾಗಿ ಮಾರ್ಗದರ್ಶಕ ಯೋಜನೆಯೊಂದನ್ನು ತಯಾರಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.