ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಪಶ್ಚಿಮ ಏಷ್ಯಾಕ್ಕೆ ವಿಶ್ವಸಂಸ್ಥೆ ತುರ್ತು ಪಡೆ ರವಾನೆ

Published 27 ಅಕ್ಟೋಬರ್ 2023, 0:03 IST
Last Updated 27 ಅಕ್ಟೋಬರ್ 2023, 0:03 IST
ಅಕ್ಷರ ಗಾತ್ರ

ಪಶ್ಚಿಮ ಏಷ್ಯಾಕ್ಕೆ ವಿಶ್ವಸಂಸ್ಥೆ ತುರ್ತು ಪಡೆ ರವಾನೆ

ವಿಶ್ವಸಂಸ್ಥೆ, ಅ. 26– ಮಧ್ಯಪ್ರಾಚ್ಯದ ಕದನ ವಿರಾಮ ಉಸ್ತುವಾರಿಗಾಗಿ ಸೈಪ್ರಸ್‌ನಿಂದ ಈಜಿಪ್ಟಿಗೆ ತಕ್ಷಣ ಹೊರಡಬೇಕೆಂದು ಆಸ್ಟ್ರಿಯ, ಫಿನ್ಲೆಂಡ್‌ ಮತ್ತು ಸ್ವೀಡನ್‌ನಲ್ಲಿರುವ ವಿಶ್ವಸಂಸ್ಥೆ ಪಡೆಗಳಿಗೆ ಪ್ರಧಾನ ಕಾರ್ಯದರ್ಶಿ ವಾಲ್ಡ್‌ ಹೈಂ ಅವರು ಗುರುವಾರ ಆದೇಶ ನೀಡಿದರು. ಶುಕ್ರವಾರ ಅವು ಹೊರಡುವ ಸಿದ್ಧತೆಯಲ್ಲಿದ್ದವು.

ಮಧ್ಯಪ್ರಾಚ್ಯದಲ್ಲಿ ವಿಶ್ವಸಂಸ್ಥೆ ತುರ್ತು ಸೇನೆಯನ್ನಿಡಬೇಕೆಂಬ ಭದ್ರತಾ ಸಮಿತಿಯ ನಿರ್ಣಯದ ಅನುಸಾರ ಮೊದಲ ತುಕಡಿಗಳನ್ನು ರವಾನೆ ಮಾಡಲು ನೀಡಿರುವ ಆದೇಶ ಇದಾಗಿದೆ.

ಮಧ್ಯಪ್ರಾಚ್ಯಕ್ಕೆ ರಷ್ಯಾವು ತನ್ನ ಪಡೆಗಳನ್ನು ಕಳುಹಿಸಬಹುದೆಂಬ ಶಂಕೆ ಮೇರೆಗೆ ಅಮೆರಿಕವು ಗುರುವಾರ ವಿಶ್ವದಾದ್ಯಂತ ವಿವಿಧ ನೆಲೆಗಳಲ್ಲಿರುವ ತನ್ನ ಪಡೆಗಳಿಗೆ ಸನ್ನದ್ಧವಾಗಲು ಕರೆ ನೀಡಿತು.

ಆಂಧ್ರ ಮತ್ತು ಉ.ಪ್ರ.ಗಳಲ್ಲಿ ಶೀಘ್ರವೇ ಜನತಾ ಸರ್ಕಾರ ರಚನೆ: ಉನ್ನತ ಮಟ್ಟದ ನಿರ್ಧಾರ

ನವದೆಹಲಿ, ಅ. 26– ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಬೇಗ ಜನತಾ ಸರ್ಕಾರಗಳನ್ನು ಮತ್ತೆ ಅಸ್ತಿತ್ವಕ್ಕೆ ತರಲು ಕೇಂದ್ರ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿಯು ಇಂದು ಇಲ್ಲಿ ನಿರ್ಧರಿಸಿತು.

ಈ ಎರಡೂ ರಾಜ್ಯಗಳಲ್ಲಿ ಪರಿಸ್ಥಿತಿ ತಹಬಂದಿಗೆ ಬಂದು ಮಾಮೂಲಿನ ಸ್ಥಿತಿ ಉಂಟಾಗಿರುವುದನ್ನು ಸಮಿತಿಯು ತನ್ನ ಗಮನಕ್ಕೆ ತೆಗೆದುಕೊಂಡು ಈ ನಿರ್ಧಾರವನ್ನು ಕೈಗೊಂಡಿತು.

ಮುಲ್ಕಿ ಚಳವಳಿಗಳಿಂದಾಗಿ ಆಂಧ್ರ ಪ್ರದೇಶದಲ್ಲೂ, ಸಶಸ್ತ್ರ ಪೊಲೀಸ್‌ ಪಡೆಯ ಬಂಡಾಯದಿಂದ ಉತ್ತರ ಪ್ರದೇಶದಲ್ಲೂ ಇತ್ತೀಚೆಗೆ ಭಾರಿ ಗಲಭೆಗಳಾಗಿದ್ದವು. ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಸಭೆಯ ಅಧ್ಯಕ್ಷತೆವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT