ಶನಿವಾರ, ಏಪ್ರಿಲ್ 1, 2023
33 °C

50 ವರ್ಷಗಳ ಹಿಂದೆ: ಭಾನುವಾರ, ಜನವರಿ 14, 1973

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ, ಭಾಷಾಂಧತೆಯ ವಿರುದ್ಧ ಸತತ ಸಮರಕ್ಕೆ ಹಸನ್‌ ಕರೆ
ಮೈಸೂರು, ಜ. 13–
ರಾಷ್ಟ್ರೀಯ ಐಕ್ಯಶಕ್ತಿ ಮತ್ತು ಪ್ರಗತಿಗೆ ಬೆದರಿಕೆ ಒಡ್ಡಿ ಅಲ್ಲಲ್ಲಿ ಅಸಹ್ಯಕರವಾಗಿ ತಲೆ ಎತ್ತುತ್ತಿರುವ ಪ್ರಾದೇಶಿಕತೆ, ಜಾತೀಯತೆ ಹಾಗೂ ಭಾಷಾಂಧತೆಯ ವಿರುದ್ಧ ದತತ ಸಮರ ಹೂಡುವಂತೆ ಕೇಂದ್ರ ಶಿಕ್ಷಣ ಸಚಿವ ಪ್ರೊ. ಎಸ್‌. ನೂರುಲ್‌ಹಸನ್‌ ಅವರು ಇಲ್ಲಿ ನವ ಪದವೀಧರರಿಗೆ ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಐವತ್ತನೇ ಪದವೀದಾನ ಸಮಾರಂಭದಲ್ಲಿ ದೀಕ್ಷಾಂತ ಭಾಷಣ ಮಾಡಿದ ಹಸನ್‌ ಅವರು, ನಿಜವಾದ ಉನ್ನತ ಶಿಕ್ಷಣ ಎಲ್ಲ ರೀತಿಯ ಸಂಕುಚಿತಗಳನ್ನು ಬಹಿಷ್ಕರಿಸಿ ಉದಾತ್ತ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವುದೇ ಅಲ್ಲದೆ ನಮ್ಮ ರಾಷ್ಟ್ರೀಯ ಉದ್ದೇಶವಾದ ಜಾತ್ಯಾತೀತತೆ, ಪ್ರಜಾಸತ್ತೆ ಮತ್ತು ಸಮಾಜವಾದಿ ಸಮಾಜ ರಚನೆಗೆ ನೆರವಾಗುವುದೆಂದು ಆಶಿಸಿದರು.

ರಾಜಕಾರಣಿಗಳಿಗೂ ಆಡಳಿತ ಬಗ್ಗೆ ತರಪೇತಿ ಅಗತ್ಯ
ಮೈಸೂರು, ಜ. 13–
ಆಡಳಿತ ನಿರ್ವಹಣೆಯಲ್ಲಿ ಅಧಿಕಾರಿಗಳಂತೆ ಸಮಪಾಲುದಾರರಾದ ರಾಜಕಾರಣಿಗಳಿಗೂ ಆಡಳಿತದ ಬಗ್ಗೆ ತರಪೇತಿ ನೀಡಬೇಕೆಂದು ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ಅಪೇಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು