ಹುಬ್ಬಳ್ಳಿ– ಕಾರವಾರ ರೈಲು ಹಾದಿ ಸಮೀಕ್ಷಾ ಕಾರ್ಯ ಸಂಪೂರ್ಣ
ಬೆಂಗಳೂರು, ಮಾರ್ಚ್ 8– ಹುಬ್ಬಳ್ಳಿ–ಕಾರವಾರ ರೈಲು ಮಾರ್ಗ ನಿರ್ಮಾಣದ ಬಗ್ಗೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷಾ ವರದಿ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ.
ವಿಧಾನ ಪರಿಷತ್ತಿನಲ್ಲಿ ಇಂದು ಶ್ರೀ ಎಸ್.ಸಿ.ಕುಬ್ಸದ್ (ಸಂ.ಕಾಂ) ಅವರ ಪ್ರಶ್ನೆಗೆ ಉತ್ತರಿಸಿದ, ಲೋಕೋಪಯೋಗಿ ಖಾತೆಯ ಸಚಿವ ಶ್ರೀ ಎಚ್.ಎಂ.ಚನ್ನಬಸಪ್ಪ ಅವರು ಕೇಂದ್ರ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದರು.
ಅವಾಮಿ ಲೀಗ್‌ಗೆ ಅತ್ಯದ್ಭುತ ಜಯ: 300ರ ಪೈಕಿ 291 ಸ್ಥಾನಗಳು
ಡಾಕಾ, ಮಾರ್ಚ್ 8 – ಬಾಂಗ್ಲಾದೇಶದ 300 ಮಂದಿ ಸದಸ್ಯರ ರಾಷ್ಟ್ರೀಯ ಸಂಸತ್ತಿಗೆ ಇಂದು ಫಲಿತಾಂಶ ಪ್ರಕಟವಾದ 297 ಸ್ಥಾನಗಳಲ್ಲಿ ಶೇಖ್ ಮುಜೀಬುರ್ ರಹಮಾನ್ ಅವರ ಅವಾಮಿ ಲೀಗ್ ಪಕ್ಷವು 291 ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ವಿಜಯ ಸಾಧಿಸಿದೆ.
ಮುಜೀಬ್ ಮತ್ತು ಅವರ ಸಂಪುಟದ ಎಲ್ಲ 22 ಮಂದಿ ಸಚಿವರೂ ಪುನರ್ ಆಯ್ಕೆಗೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.