ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷದ ಹಿಂದೆ: ಭದ್ರಾವತಿ ಉಕ್ಕು ಕಾರ್ಖಾನೆ ವೈಫಲ್ಯ ತನಿಖೆಗೆ ಕಾರ್ಯದರ್ಶಿ

Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಭದ್ರಾವತಿ ಉಕ್ಕು ಕಾರ್ಖಾನೆ ವೈಫಲ್ಯ ತನಿಖೆಗೆ ಮಾಜಿ ಮುಖ್ಯ ಕಾರ್ಯದರ್ಶಿ

ಬೆಂಗಳೂರು, ಏ. 8– ಭದ್ರಾವತಿಯ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕೆಲವು ವಿಚಾರಗಳ ಬಗ್ಗೆ ಇನ್ನೂ ಕೂಲಂಕಷ ತನಿಖೆ ನಡೆಸಲು ಮತ್ತು ಕೆಲವು ವೈಫಲ್ಯಗಳ ಬಗ್ಗೆ ಜವಾಬ್ದಾರಿ ಗೊತ್ತುಪಡಿಸಲು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ನಾರಾಯಣಸ್ವಾಮಿ ಅವರನ್ನು ಆರು ತಿಂಗಳ ಅವಧಿಗೆ ನೇಮಕ ಮಾಡಲಾಗಿದೆಯೆಂದು ಕೈಗಾರಿಕೆ ಸಚಿವ ಎಸ್.ಎಂ.ಕೃಷ್ಣ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಎಸ್.ಬಂಗಾರಪ್ಪ, ಬಿ.ಪುಟ್ಟಸ್ವಾಮಯ್ಯ ಮತ್ತು ಅನ್ವರ್ ಅಬ್ದುಲ್ ಖುದ್ದೂಸ್ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಸಿಬ್ಬಂದಿ ಪ್ರಶ್ನೆ ಅವರ ವ್ಯಾಪ್ತಿಗೆ ಒಳಪಡಬಾರದೆಂಬುದು ತಮ್ಮ ಅಭಿಪ್ರಾಯವೆಂದರು.

ದೆಹಲಿ ತ್ರಿಪಕ್ಷ ಮಾತುಕತೆಯಲ್ಲಿ ಇತ್ಯರ್ಥ ಸನ್ನಿಹಿತ

ನವದೆಹಲಿ, ಏ. 8– ಬಾಂಗ್ಲಾದೇಶದಲ್ಲಿ ಉಳಿದ ಪಾಕಿಸ್ತಾನೀಯರನ್ನು ಸ್ವದೇಶಕ್ಕೆ ರವಾನಿಸುವುದು ಮತ್ತು 195 ಯುದ್ಧ ಕೈದಿಗಳ ಬಗ್ಗೆ ಒಪ್ಪಂದವೊಂದು ಏರ್ಪಡುವ ಸಾಧ್ಯತೆಯು ಇಂದು ಬಹಳಮಟ್ಟಿಗೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT