ನಗರದ ಎಚ್ಎಂಟಿ ಕಾರ್ಖಾನೆಯಲ್ಲಿ ಅನಿರ್ದಿಷ್ಟ ಕಾಲ ಲಾಕ್‌ಔಟ್ ಘೋಷಣೆ

ಬೆಂಗಳೂರು, ನ. 10– ನಗರದ ಎಚ್ಎಂಟಿ ಕಾರ್ಖಾನೆಯಲ್ಲಿ ಎರಡು ತಂಡದ ಕಾರ್ಮಿಕರ ನಡುವೆ ಇರುವ ವೈಷಮ್ಯದ ಫಲವಾಗಿ ಇಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕಾರ್ಖಾನೆ ಆಸ್ತಿ ಹಾಗೂ ನೌಕರರ ಪ್ರಾಣಾಪಾಯ ಉಂಟಾಗು ವುದನ್ನು ತಪ್ಪಿಸಲು ಆಡಳಿತವರ್ಗ ಅನಿರ್ದಿಷ್ಟ ಕಾಲ ಲಾಕ್‌ಔಟ್ ಘೋಷಿಸಿತು.

ಇದೇ ಕಾರಣಕ್ಕಾಗಿ ಕೇವಲ ಒಂದು ತಿಂಗಳ ಹಿಂದೆ ಲಾಕ್‌ಔಟ್ ಆಗಿದ್ದ ಘಟನೆ ಯನ್ನು ಪ್ರಸ್ತಾಪಿಸಿ ಕಾರ್ಖಾನೆಯಲ್ಲಿ ಕಾರ್ಮಿಕರು ಸಂಪೂರ್ಣ ಶಿಸ್ತು ಪಾಲಿಸಿ ಶಾಂತಿ ನೆಲೆಸುವು ದೆಂದು ಖಾತರಿ ಆಗುವವರೆಗೆ ಲಾಕ್‌ಔಟ್ ತೆಗೆಯುವುದಿಲ್ಲವೆಂದು ಆಡಳಿತ ವರ್ಗ ಸ್ಪಷ್ಟಪಡಿಸಿದೆ.

ವಿದೇಶಿ ಉಡುಪು ಧರಿಸಿದರೆ ಬಂದಿಖಾನೆಗೆ
ನವದೆಹಲಿ, ನ. 10– ಭೂತಾನಿಗಳದ್ದಲ್ಲದ ಉಡುಪನ್ನು ತೊಡಬಾರದೆಂದು ಭೂತಾನ್ ಜನರಿಗೆ ಅಲ್ಲಿನ ಗೃಹಸಚಿವರು ಆಜ್ಞೆ ಮಾಡಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿರುವ ಭೂತಾನಿಗಳು ಪಾಶ್ಚಿಮಾತ್ಯ ತೊಡುಗೆಗಳನ್ನು ತೊರೆದು ಭೂತಾನ್ ಉಡುಪನ್ನು ಮಾತ್ರ ತೊಡಬೇಕು. ಈ ಆಜ್ಞೆ ಹಿರಿಯ ಅಧಿಕಾರಿಗಳಿಂದ ಹಿಡಿದು ಚಾಲಕರವರೆಗೆ ಅನ್ವಯಿಸುತ್ತದೆ.

ಸರ್ಕಾರಿ ಹುದ್ದೆಗಳಲ್ಲಿಲ್ಲದ ಸಾರ್ವಜನಿಕರೂ ಸಹ ‘ಭೂತಾನಿಗಳ ನಮೂನೆಯದಾಗಿರದ ಉಡುಪನ್ನು ಬಳಸಬಾರದು’ ಎಂದು ಗೃಹಸಚಿವರ ಆಜ್ಞೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.