ಭಾನುವಾರ, ಮೇ 29, 2022
21 °C

50 ವರ್ಷಗಳ ಹಿಂದೆ: ಶುಕ್ರವಾರ, ಡಿಸೆಂಬರ್ 24, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೊಂದು ಭಾರತ– ಪಾಕ್‌ ಸಮರ ಅಸಂಭವ: ರಾಂ
ನವದೆಹಲಿ, ಡಿ. 23
– ಭಾರತ ಪಾಕಿಸ್ತಾನಗಳ ನಡುವೆ ಮತ್ತೊಂದು ಸಮರದ ಸಾಧ್ಯತೆ ತಮಗೆ ಕಾಣಬರುತ್ತಿಲ್ಲವೆಂದು ರಕ್ಷಣಾ ಸಚಿವ ಜಗಜೀವನ ರಾಂ ತಿಳಿಸಿದ್ದಾರೆ.

‘ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಮಾಡಿದ ಪ್ರಥಮ ಪ್ರಸಾರ ಭಾಷಣದಲ್ಲಿ ಸಮರದ ಬೆದರಿಕೆ ಹಾಕಿದರು. ಆದರೆ ಆನಂತರ ಮಾಡಲಾದ ಭಾಷಣಗಳಲ್ಲಿ ಭುಟ್ಟೋ ಅವರೇ ಸಮರದ ಬೆದರಿಕೆಯನ್ನು ಕಡಿಮೆ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕಬ್ಬಿನ ಕನಿಷ್ಠ ಬೆಲೆ ಏರಿಸಲು ಒಪ್ಪಿಗೆ
ನವದೆಹಲಿ, ಡಿ. 23–
ಕಬ್ಬು ಬೆಳೆಗಾರರಿಗೆ ಶಾಸನ ಬದ್ಧ ಕನಿಷ್ಠ ದರಕ್ಕಿಂತ ಹೆಚ್ಚು ನೀಡಲು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಬಳಕೆದಾರರ ಸಕ್ಕರೆ ಬೆಲೆಯನ್ನು ಕಿಲೋಗೆ ಎರಡು ರೂ.ಗೆ ಇಳಿಸಲು ರಾಷ್ಟ್ರದಲ್ಲಿನ ಸಕ್ಕರೆ ಗಿರಣಿ ಮಾಲೀಕರು ಒಪ್ಪಿಕೊಂಡಿರುವುದಾಗಿ ಸರ್ಕಾರ ಇಂದು ಲೋಕಸಭೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು